ಛತ್ತೀಸ್‌ಗಢ: ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿದ ಮೂವರು ನರ್ಸ್‌ಗಳ ವಜಾ

ಛತ್ತೀಸ್‌ಗಢದ ರಾಯ್‌ಪುರದ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರು ನರ್ಸ್‌ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛತ್ತೀಸ್‌ಗಢ: ಛತ್ತೀಸ್‌ಗಢದ ರಾಯ್‌ಪುರದ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರು ನರ್ಸ್‌ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ದೌ ಕಲ್ಯಾಣ್ ಸಿಂಗ್ ಪಿಜಿ ಇನ್‌ಸ್ಟಿಟ್ಯೂಟ್ ಮತ್ತು ರಿಸರ್ಚ್ ಸೆಂಟರ್ ರಾಯ್‌ಪುರದಲ್ಲಿ ದಿನಗೂಲಿ ಸ್ಟಾಫ್ ನರ್ಸ್‌ಗಳಾಗಿದ್ದ ಪುಷ್ಪಾ ಸಾಹು, ತೃಪ್ತಿ ದಾಸರ್ ಮತ್ತು ತೇಜ್ ಕುಮಾರಿ ಅವರ ವಿರುದ್ಧ ದೂರು ಬಂದ ನಂತರ ಫೆಬ್ರವರಿ 23 ರಂದು ಅವರನ್ನು ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಹೇಮಂತ್ ಶರ್ಮಾ ಹೇಳಿದ್ದಾರೆ.

ಫೆಬ್ರವರಿ 5 ರಂದು, ಸುಟ್ಟ ಮತ್ತು ಪ್ಲಾಸ್ಟಿಕ್ ಸರ್ಜರಿ ಘಟಕದ ಆಪರೇಷನ್ ಥಿಯೇಟರ್‌ನಲ್ಲಿ ಈ ಮೂವರು ಶೂಟ್ ಮಾಡಿದ ರೀಲ್ಸ್ ಗಳು ಸಹಾಯಕ ನರ್ಸಿಂಗ್ ಸೂಪರಿಂಟೆಂಡೆಂಟ್ ಅವರ ಗಮನಕ್ಕೆ ಬಂದ ನಂತರ ಉನ್ನತ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಶರ್ಮಾ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ; 38 ವಿದ್ಯಾರ್ಥಿಗಳ ಅಮಾನತು!

ಆಪರೇಷನ್ ಥಿಯೇಟರ್‌ ಒಳಗೆ ಚಿತ್ರಗಳನ್ನು ಕ್ಲಿಕ್ ಮಾಡುವುದು ಮತ್ತು ರೀಲ್ಸ್ ಮಾಡುವುದು ನಿಯಮಗಳಿಗೆ ವಿರುದ್ಧವಾಗಿದೆ. ನರ್ಸ್‌ಗಳು ಸಾಮಾನ್ಯವಾಗಿ ಒಟಿಯ ಹೊರಗೆ ಧರಿಸುವ ಶೂ ಮತ್ತು ಸ್ಯಾಂಡಲ್‌ಗಳನ್ನು ಸಹ ಧರಿಸಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com