ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು: ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಶಿಮ್ಲಾಗೆ ದೌಡು!

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಉಪಮುಖ್ಯಮಂತ್ರಿ ಮತ್ತು ಹಿಮಾಚಲ ಪ್ರದೇಶದ ಕಾಂಗ್ರೆಸ್ ವೀಕ್ಷಕ ಡಿಕೆ ಶಿವಕುಮಾರ್ ಅವರನ್ನು ಬಿಕ್ಕಟ್ಟು ನಿರ್ವಹಣೆಗೆ ಮುಂದಾಗುವಂತೆ ಪಕ್ಷದ ನಿರ್ದೇಶಸಿದ ನಂತರ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ.
ಡಿಸಿಎಂ ಡಿಕೆಶಿವಕುಮಾರ್, ಸುಖ್ವಂದರ್ ಸಿಂಗ್
ಡಿಸಿಎಂ ಡಿಕೆಶಿವಕುಮಾರ್, ಸುಖ್ವಂದರ್ ಸಿಂಗ್

ಶಿಮ್ಲಾ: ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಉಪಮುಖ್ಯಮಂತ್ರಿ ಮತ್ತು ಹಿಮಾಚಲ ಪ್ರದೇಶದ ಕಾಂಗ್ರೆಸ್ ವೀಕ್ಷಕ ಡಿಕೆ ಶಿವಕುಮಾರ್ ಅವರನ್ನು ಬಿಕ್ಕಟ್ಟು ನಿರ್ವಹಣೆಗೆ ಮುಂದಾಗುವಂತೆ ಪಕ್ಷದ ನಿರ್ದೇಶಸಿದ ನಂತರ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಹಿಮಾಲಯ ತಪ್ಪಲಿನ ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಅದು ಮುಂದೊಂದು ಮತ್ತಷ್ಟು ಮತ್ತಷ್ಟು ಹೆಚ್ಚಾಗಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಅಲ್ಲಿಯೇ ಇರಬೇಕು ಎಂದು ಕಾಂಗ್ರೆಸ್ ಪಕ್ಷ ನಿರ್ದೇಶನ ನೀಡಿದೆ. ಬಿಜೆಪಿಗೆ ಏಕೆ ಇಷ್ಟು ಆತುರ ಎಂಬುದು ನನಗೆ ತಿಳಿಯುತ್ತಿಲ್ಲ. ಯಾವುದೇ ಸರ್ಕಾರ ಪ್ರಬಲವಾದ ವಿರೋಧ ಪಕ್ಷವನ್ನು ಹೊಂದಿರಬೇಕು, ಆದರೆ, ಈ ರೀತಿಯ ಕುದುರೆ ವ್ಯಾಪಾರ ಸರಿಯಲ್ಲ. ಇದು ಮುಂದೊಂದು ದಿನ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ಎಲ್ಲಾ ಶಾಸಕರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದುರು.

ಡಿಸಿಎಂ ಡಿಕೆಶಿವಕುಮಾರ್, ಸುಖ್ವಂದರ್ ಸಿಂಗ್
ಹಿಮಾಚಲ ಪ್ರದೇಶ: ಬಿಜೆಪಿಯ 15 ಶಾಸಕರ ಅಮಾನತು ಮಾಡಿದ ಸ್ಪೀಕರ್; ಸಚಿವ ವಿಕ್ರಮಾದಿತ್ಯ ಸಿಂಗ್ ರಾಜಿನಾಮೆ

ಈ ಮಧ್ಯೆ ಶಿಮ್ಲಾದಲ್ಲಿ ಹಿಮಾಚಲ ಪ್ರದೇಶದ 15 ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಬುಧವಾರ ತಮ್ಮ ಚೇಂಬರ್‌ನಲ್ಲಿ ಗದ್ದಲ ಸೃಷ್ಟಿಸಿದ ಆರೋಪದಲ್ಲಿ ಸದನದಿಂದ ಅಮಾನತುಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com