'ಜುಮ್ಲಾ'ಗಳು ಸಾಕು, ಜನರಿಗೆ ಉತ್ತರಿಸುವ ಸಮಯ ಬಂದಿದೆ: ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್, "ಜುಮ್ಲಾಗಳು ಸಾಕು" ಈಗ ಜನತೆಗೆ ಉತ್ತರಿಸುವ ಸಮಯ ಬಂದಿದೆ.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್, "ಜುಮ್ಲಾಗಳು ಸಾಕು" ಈಗ ಜನತೆಗೆ ಉತ್ತರಿಸುವ ಸಮಯ ಬಂದಿದೆ ಎಂದು ಗುರುವಾರ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

16 ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 72 ಸಾವಿರ ಕೋಟಿ ರೂ. ಕೃಷಿ ಸಾಲ ಮತ್ತು 3.73 ಕೋಟಿ ರೂ. ರೈತರ ಬಡ್ಡಿಯನ್ನು ಮನ್ನಾ ಮಾಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

"ಕಾಂಗ್ರೆಸ್‌ ತಾನು ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಆದರೆ ಪ್ರಧಾನಿ ಮೋದಿ ಮೋದಿ ರೈತರಿಗೆ ಎರಡು ದೊಡ್ಡ ಭರವಸೆಗಳನ್ನು ನೀಡಿದ್ದರು. ಮೊದಲನೆಯದು, ವೆಚ್ಚ ಹಾಗೂ ಶೇ. 50 ರಷ್ಟು ಎಂಎಸ್ ಪಿ ಭರವಸೆ ಮತ್ತು ಎರಡನೆಯದು 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು.

ರೈತರ ಪ್ರತಿಭಟನೆ
ಲೋಕಸಭಾ ಚುನಾವಣೆ; ಮಾದರಿ ನೀತಿ ಸಂಹಿತೆ ಜಾರಿ ನಂತರವೂ ರೈತರ ಪ್ರತಿಭಟನೆ ನಿಲ್ಲಲ್ಲ!

'ಮೋದಿಯವರ ಈ ಎರಡೂ ಖಾತರಿಗಳು' ಹುಸಿಯಾಗಿವೆ ಮತ್ತು ರೈತರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ" ಎಂದು ಕಾಂಗ್ರೆಸ್ ಅಧ್ಯಕ್ಷರು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಈಗ ಕಾಂಗ್ರೆಸ್ ಮತ್ತೆ ರೈತರಿಗೆ ಭರವಸೆ ನೀಡುತ್ತಿದೆ - ನಾವು 15 ಕೋಟಿ ರೈತ ಕುಟುಂಬಗಳಿಗೆ ಎಂಎಸ್‌ಪಿಯನ್ನು ಕಾನೂನುಬದ್ಧವಾಗಿ ಜಾರಿಗೊಳಿಸುತ್ತೇವೆ. ಕಾಂಗ್ರೆಸ್ ಮಾತ್ರ ತನ್ನ ಭರವಸೆಯನ್ನು ಈಡೇರಿಸುತ್ತದೆ" ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com