ನರೇಂದ್ರ ಮೋದಿ
ನರೇಂದ್ರ ಮೋದಿ

'1980ರ ಮಹಾಭಾರತ, ರಾಮಾಯಣ ಮೆಗಾ ಧಾರಾವಾಹಿಗಿಂತಲೂ ಪ್ರಧಾನಿಯವರ 'ಮನ್ ಕಿ ಬಾತ್' ಹೆಚ್ಚು ಜನಪ್ರಿಯ'

ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮವು, 1980ರ ದಶಕದ 'ರಾಮಾಯಣ' ಮತ್ತು 'ಮಹಾಭಾರತ' ಟಿವಿ ಧಾರಾವಾಹಿಗಳಿಗಿಂತಲೂ  ಹೆಚ್ಚು ಜನಪ್ರಿಯವಾಗಿವೆ ಎಂದು ತ್ರಿಪುರಾ ಸಿಎಂ ಮಾಣಿಕ್ ಸಹಾ ಹೇಳಿದ್ದಾರೆ.

ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮವು, 1980ರ ದಶಕದ 'ರಾಮಾಯಣ' ಮತ್ತು 'ಮಹಾಭಾರತ' ಟಿವಿ ಧಾರಾವಾಹಿಗಳಿಗಿಂತಲೂ  ಹೆಚ್ಚು ಜನಪ್ರಿಯವಾಗಿವೆ ಎಂದು ತ್ರಿಪುರಾ ಸಿಎಂ ಮಾಣಿಕ್ ಸಹಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ 108ನೇ ಸಂಚಿಕೆಯನ್ನು ತಮ್ಮ ತವರು ಕ್ಷೇತ್ರ ಬರ್ಡೋವಾಲಿಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜತೆ ಕುಳಿತು ಆಲಿಸಿದ ಬಳಿಕ ಸಿಎಂ ಸಹಾ ಈ ಹೇಳಿಕೆ ನೀಡಿದ್ದಾರೆ.

ಪ್ರತಿ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಮಹಾಭಾರತ' ಮತ್ತು 'ರಾಮಾಯಣ' ಧಾರಾವಾಹಿ ಸಂಚಿಕೆಗಳನ್ನು ವೀಕ್ಷಿಸಲು ನಮ್ಮ ತಾಯಂದಿರು ಮತ್ತು ಸಹೋದರಿಯರು ಟಿವಿಗಳ ಮುಂದೆ ಓಡುವುದನ್ನು ನಾವು ನೋಡುತ್ತಿದ್ದೆವು. ಈ ದಿನಗಳಲ್ಲಿ ನಾವು, ನಮ್ಮ ತಾಯಂದಿರು ಮತ್ತು ಸಹೋದರಿಯರು ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಆಲಿಸಲು ದೌಡಾಯಿಸುವುದನ್ನು ನೋಡುತ್ತಿದ್ದೇವೆ. 1980ರ ದಶಕದ ಧಾರವಾಹಿಗಳಿಗಿಂತಲೂ ಈ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದೆ" ಎಂದು ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

1980ರಲ್ಲಿ ಕೂಡ ಟಿವಿ ಶೋಗಳನ್ನು ನೋಡಲು ಮಹಿಳೆಯರು ದೌಡಾಯಿಸುವುದನ್ನು ಜನರು ಟೀಕಿಸಿದ್ದರು. ಈಗ ಕೂಡ ಮನ್ ಕಿ ಬಾತ್ ಆಲಿಸುವವರನ್ನು ಅನೇಕರು ಟೀಕಿಸುತ್ತಾರೆ. ಆದರೆ ಜನರಿಗೆ ಯಾವುದು ಏನು ಎನ್ನುವುದು ತಿಳಿದಿದೆ. ಹೀಗಾಗಿ ಅದರಿಂದ ಯಾವ ವ್ಯತ್ಯಾಸವೂ ಆಗದು ಎಂದು ಪ್ರತಿಪಾದಿಸಿದ್ದಾರೆ.

ಮಹಾ ಪುರಾಣಗಳನ್ನು ಆಧರಿಸಿದ ಮಹಾಭಾರತ (1988) ಮತ್ತು ರಾಮಾಯಣ (1987) ಟಿವಿ ಧಾರಾವಾಹಿಗಳನ್ನು ಕ್ರಮವಾಗಿ ಬಿಆರ್ ಚೋಪ್ರಾ ಮತ್ತು ರಮಾನಂದ ಸಾಗರ್ ನಿರ್ದೇಶಿಸಿದ್ದರು. ಆಗ ಲಭ್ಯವಿದ್ದ ಏಕೈಕ ಟಿವಿ ವಾಹಿನಿ ದೂರದರ್ಶನದಲ್ಲಿ ಇವು ಪ್ರಸಾರವಾಗಿದ್ದವು.

Related Stories

No stories found.

Advertisement

X
Kannada Prabha
www.kannadaprabha.com