'ಮುಸ್ಲಿಂ ಸಮುದಾಯದವರನ್ನು ಕೆರಳಿಸುತ್ತಿದ್ದೀರಿ': ಅಸಾದುದ್ದೀನ್ ಓವೈಸಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ VHP

ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಮಂಗಳವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಹೇಳಿಕೆಗೆ ಎಚ್ಚರಿಕೆ ನೀಡಿದ್ದಾರೆ. 
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ
Updated on

ನವದೆಹಲಿ: ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಮಂಗಳವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಹೇಳಿಕೆಗೆ ಎಚ್ಚರಿಕೆ ನೀಡಿದ್ದಾರೆ. 

ಅಸಾದುದ್ದೀನ್ ಓವೈಸಿ ತಮ್ಮ ಸಮುದಾಯಕ್ಕೆ ಕರೆನೀಡಿ ''ಯುವಜನರೇ, ನಾನು ನಿಮಗೆ ಹೇಳುತ್ತಿದ್ದೇನೆ, ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮಗೆ ನೋವಾಗುತ್ತಿಲ್ಲವೇ?" ಎಂದು ಕೇಳಿದ್ದರು. ಅಸಾದುದ್ದೀನ್ ಹೇಳಿಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸುರೇಂದ್ರ ಜೈನ್, ಶ್ರೀರಾಮ ಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಓವೈಸಿ ಪದೇ ಪದೇ ಟೀಕಿಸುವ ರೀತಿ ಸುಪ್ರೀಂ ಕೋರ್ಟ್‌ನ ಅವಹೇಳನದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದರು.

ಮುಸ್ಲಿಂ ಸಮುದಾಯದ ಜನರನ್ನು ಮತ್ತೆ ಮತ್ತೆ ಕೆರಳಿಸದಂತೆ ಓವೈಸಿಯಂತಹ ನಾಯಕರಿಗೆ ಎಚ್ಚರಿಕೆ ನೀಡಲು ನಾನು ಬಯಸುತ್ತೇನೆ, ಮುಸ್ಲಿಂ ಸಮಾಜವನ್ನು ಅವರು ಕತ್ತಲೆಯ ಕಡೆಗೆ ತಳ್ಳುತ್ತಿದ್ದಾರೆ, ಅವರ ಅಂತ್ಯವು ಅಭಿವೃದ್ಧಿಗೆ ಕಾರಣವಾಗುವುದಿಲ್ಲ ಎಂದು ಹೇಳಿದ್ದಾರೆ. 

ಓವೈಸಿ ಅವರ ಹೇಳಿಕೆಯನ್ನು ಖಂಡಿಸುವುದಾಗಿ ವಿಹೆಚ್ ಪಿಯ ಹಿರಿಯ ನಾಯಕ ಸುರೇಂದ್ರ ಜೈನ್ ಎಎನ್‌ಐಗೆ ತಿಳಿಸಿದ್ದಾರೆ. ಅವರ ಹೇಳಿಕೆಯು ಕಾನೂನು ಮಿತಿಗಳನ್ನು ಮೀರಿದೆಯೇ, ಸಂವಿಧಾನದ ಮಿತಿಗಳನ್ನು ಮೀರಿದೆಯೇ ಮತ್ತು ಕಾನೂನನ್ನು ಉಲ್ಲಂಘಿಸುತ್ತಿದೆಯೇ ಎಂದು ಪರಿಶೀಲಿಸಲು ಕಾನೂನು ಕೋಶ ತಂಡವನ್ನು ಕೇಳಿದೆ. 

ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣವು ಪೂರ್ಣಗೊಳ್ಳುವ ಹಂತದಲ್ಲಿದೆ, ಒವೈಸಿಯಂತಹ ಕೆಲವು ಮುಸ್ಲಿಂ ನಾಯಕರ ಹತಾಶೆ ವೇಗವಾಗಿ ಹೆಚ್ಚುತ್ತಿದೆ. ಮುಸ್ಲಿಂ ಸಮಾಜದ ದೊಡ್ಡ ವರ್ಗವನ್ನು ನೋಡಿದಾಗ ಅವರು ಇನ್ನಷ್ಟು ಹತಾಶರಾಗುತ್ತಿದ್ದಾರೆ. ಭವ್ಯ ಮಂದಿರವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದೆ, ಹತಾಶೆಯಿಂದ ಅವರು ಇಂತಹ ಮಾತುಗಳನ್ನು ಹೇಳುತ್ತಾರೆ ಇದು ಮುಸ್ಲಿಂ ಸಮಾಜದ ಒಂದು ವರ್ಗವನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವುದು ಮಾತ್ರವಲ್ಲದೆ ಸರ್ಕಾರದ ವಿರುದ್ಧ ಅವರನ್ನು ಪ್ರಚೋದಿಸುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com