ಭಗವಾನ್ ರಾಮ ಮಾಂಸಾಹಾರಿ; ಗಾಂಧಿ, ನೆಹರು ಅವರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು: ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶರದ್ ಪವಾರ್ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್, ಭಗವಾನ್ ರಾಮನ ಕುರಿತು ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.
ಜಿತೇಂದ್ರ ಅವ್ಹಾದ್
ಜಿತೇಂದ್ರ ಅವ್ಹಾದ್
Updated on

ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶರದ್ ಪವಾರ್ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್, ಭಗವಾನ್ ರಾಮನ ಕುರಿತು ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.

ಭಗವಾನ್ ರಾಮನು 'ಬಹುಜನರಿಗೆ' ಸೇರಿದವನು ಮತ್ತು ಆತ ಮಾಂಸಾಹಾರಿಯಾಗಿದ್ದ ಎಂದು ಹೇಳಿದ್ದಾರೆ. ಜನವರಿ 22 ರಂದು ಅಯೋಧ್ಯೆಯ ಪವಿತ್ರೀಕರಣ ಸಮಾರಂಭದ ದಿನದಂದು ರಾಜ್ಯದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವಂತೆ ಬಿಜೆಪಿ ಶಾಸಕ ರಾಮ್ ಕದಮ್ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ ಒಂದು ದಿನದ ನಂತರ ಜಿತೇಂದ್ರ ಅವ್ಹಾದ್ ಈ ಹೇಳಿಕೆ ನೀಡಿದ್ದಾರೆ. 

ಭಗವಾನ್ ರಾಮ ಎಲ್ಲರಿಗೆ ಸೇರಿದವನು. ರಾಮನು ಬಹುಜನಪ್ರಿಯ, ಬೇಟೆಯಾಡಿ ಆಹಾರ ಸೇವಿಸುತ್ತಿದ್ದ  ರಾಮ ನಮ್ಮವನು, ನಾವು ಬಹುಜನರು, ನೀವು ನಮ್ಮೆಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಹೊರಟಿರುವಾಗ ನಾವು ರಾಮನ ಆದರ್ಶಗಳನ್ನು ಅನುಸರಿಸುತ್ತೇವೆ. ಇಂದು ನಾವು ಕುರಿಮರಿಯನ್ನು ತಿನ್ನುತ್ತೇವೆ. ಇದು ರಾಮನ ಆದರ್ಶ. ರಾಮನು ಸಸ್ಯಾಹಾರಿಯಾಗಿರಲಿಲ್ಲ, ಮಾಂಸಾಹಾರಿಯಾಗಿದ್ದನು ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 

14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಎಲ್ಲಿ ಹುಡುಕಲು ಹೋಗುತ್ತಾನೆ? ನನ್ನ ಈ ಮಾತು ಸರಿಯೋ, ತಪ್ಪೋ ನೀವು ಯೋಚನೆ ಮಾಡಿ, ನಾನು ಸತ್ಯವೇ ಹೇಳುತ್ತಿರುವುದು ಎಂದು ನಿಮಗೆ ಅನಿಸದೆ ಇರದು ಎಂದಿದ್ದಾರೆ. 

ಗಾಂಧಿ-ನೆಹರೂವಿನಿಂದ ದೇಶಕ್ಕೆ ಸ್ವಾತಂತ್ರ್ಯ: ಯಾರು ಏನು ಬೇಕಾದರೂ ಹೇಳಲಿ, ಗಾಂಧಿ ಮತ್ತು ನೆಹರು ಅವರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಸತ್ಯ. ಗಾಂಧೀಜಿ 1947 ರಲ್ಲಿ ಹತ್ಯೆಯಾಗಲಿಲ್ಲ, ಅವರ ಮೇಲೆ ಮೊದಲ ದಾಳಿ 1935 ರಲ್ಲಿ ನಡೆಯಿತು, ಎರಡನೇ ದಾಳಿ 1938 ರಲ್ಲಿ ನಡೆಯಿತು. , ಮೂರನೇ ದಾಳಿಯು 1942 ರಲ್ಲಿ ನಡೆಯಿತು.

ಅಷ್ಟಕ್ಕೂ ಅವರ ಮೇಲೆ ಅನೇಕ ಬಾರಿ ಏಕೆ ದಾಳಿ ಮಾಡಿದರು, ಅವರು ಸಮಯದ ಬಗ್ಗೆ ಕಾಳಜಿ ವಹಿಸಲಿಲ್ಲ, ಸಂವಿಧಾನದ ಬಗ್ಗೆ ಕೂಡ ಅವರು ಕಾಳಜಿ ವಹಿಸಲಿಲ್ಲ. ಆದರೆ ಗಾಂಧೀಜಿ ವ್ಯಾಪಾರಿ ಮತ್ತು ಒಬಿಸಿ ಆಗಿದ್ದರಿಂದ ಅವರ ಮೇಲೆ ದಾಳಿ ಮಾಡಲಾಯಿತು. ಅಂತಹ ದೊಡ್ಡ ಸ್ವಾತಂತ್ರ್ಯ ಚಳವಳಿಯ ನಾಯಕರಾಗಿದ್ದ ಗಾಂಧಿಯವರು ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ಒಪ್ಪಿಕೊಳ್ಳಲು ಸ್ವೀಕರಿಸಲು ಆರ್ ಎಸ್ಎಸ್ ನವರಿಗೆ ಆಗುತ್ತಿಲ್ಲ ಎಂದರು. 

ಎನ್‌ಸಿಪಿ ನಾಯಕ ಜಿತೇಂದ್ರ ಮತ್ತಷ್ಟು ಮಾತನಾಡುತ್ತಾ, ಮಹಾತ್ಮಾ ಗಾಂಧಿಯವರ ಹತ್ಯೆಯ ಹಿಂದೆ ಜಾತೀಯತೆ ಕಂಡುಬರುತ್ತಿದೆ. ಸಾರ್ವಜನಿಕರಲ್ಲಿ ಐತಿಹಾಸಿಕ ಅರಿವಿನ ಕೊರತೆಯದೆ. ಗಾಂಧೀಜಿಯವರ ಹತ್ಯೆಯ ಹಿಂದಿನ ನಿಜವಾದ ಕಾರಣ ಜಾತೀಯತೆ. ನಮ್ಮಲ್ಲಿ ಅನೇಕರಿಗೆ ಇತಿಹಾಸ ಬಗ್ಗೆ ಅರಿವು ಇಲ್ಲ,ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ಬಗ್ಗೆ, ಇತಿಹಾಸ ಬಗ್ಗೆ ತಪ್ಪು ತಿಳುವಳಿಕೆಯಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com