ಭಗವಾನ್ ಶ್ರೀರಾಮ ಮಾಂಸಾಹಾರಿ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಎನ್ ಸಿಪಿ ನಾಯಕ ಜಿತೇಂದ್ರ ಅವ್ಹಾದ್

ಭಗವಾನ್ ರಾಮ ಮಾಂಸಾಹಾರಿ ಹೇಳಿಕೆಗೆ ತೀವ್ರ ಟೀಕೆ ಎದುರಿಸಿದ ಬಳಿಕ ಎನ್‌ಸಿಪಿ ನಾಯಕ ಜಿತೇಂದ್ರ ಅವಾದ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ ಕ್ಷಮೆಯಾಚಿಸಿದ್ದಾರೆ.
ಜಿತೇಂದ್ರ ಅವ್ಹಾದ್
ಜಿತೇಂದ್ರ ಅವ್ಹಾದ್

ಮುಂಬೈ: ಭಗವಾನ್ ರಾಮ ಮಾಂಸಾಹಾರಿ ಹೇಳಿಕೆಗೆ ತೀವ್ರ ಟೀಕೆ ಎದುರಿಸಿದ ಬಳಿಕ ಎನ್‌ಸಿಪಿ ನಾಯಕ ಜಿತೇಂದ್ರ ಅವಾದ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ ಕ್ಷಮೆಯಾಚಿಸಿದ್ದಾರೆ.

ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶದಿಂದ ನಾನು ಆ ಹೇಳಿಕೆ ನೀಡಿರಲಿಲ್ಲ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಯಾರ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ ಎಂದು ಅವ್ಹಾದ್ ಹೇಳಿದ್ದಾರೆ ಎಂದು ಸುದ್ದಿ ಎಎನ್‌ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ.

ರಾಮ ಮಾಂಸಾಹಾರಿ ಎಂಬ ಕಲ್ಪನೆಯನ್ನು ನಾನು ನನ್ನ ಮನೆಯಿಂದ ತಂದಿಲ್ಲ. ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಬರೆಯಲಾಗಿದೆ. ಕೋಲ್ಕತ್ತಾ ಮತ್ತು ಐಐಟಿ ಕಾನ್ಪುರದಲ್ಲಿ ಮುದ್ರಿಸಲಾದ 1891 ರ ಅಧಿಕೃತ ಆವೃತ್ತಿಯು ಸಾಕಷ್ಟು ಕೆಲಸ ಮಾಡಿದೆ, ಅದರಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ನಾನು ಎಲ್ಲವನ್ನೂ ಸಾರ್ವಜನಿಕರ ಮುಂದೆ ಇಡುತ್ತೇನೆ. ಇದು ನಾನು ಹೇಳಿದ್ದಲ್ಲ, 1891 ರಲ್ಲಿ ಬರೆದದ್ದು ನಾನಲ್ಲ ಎಂದು ಹೇಳಿದರು. 

ತಮ್ಮ ಹೇಳಿಕೆ ತೀವ್ರ ವಿವಾದ ಎದ್ದ ನಂತರ ಅವಾದ್ ಕ್ಷಮೆಯಾಚಿಸಿದ್ದಾರೆ. ಮಹಾರಾಷ್ಟ್ರದ ಶಿರಡಿಯಲ್ಲಿ ನಿನ್ನೆ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವ್ಹಾದ್, ಭಗವಾನ್ ರಾಮನು ಸಸ್ಯಾಹಾರಿ ಅಲ್ಲ, ಅವರು 14 ವರ್ಷಗಳ ಕಾಲ ಕಾಡಿನಲ್ಲಿ ಹೇಗೆ ಬದುಕುತ್ತಿದ್ದರು, ಬೇಟೆಯಾಡಿ ಮಾಂಸ ತಿಂದು ಬದುಕುತ್ತಿದ್ದರು ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com