ರಾಮಲಲ್ಲಾ ಪ್ರತಿಷ್ಠಾಪನೆಗೆ ಮತ್ತಷ್ಟು ಮೆರುಗು ತರಲಿದೆ ದಶರಥ ದೀಪ!

ಅಯೋಧ್ಯೆಯ ರಾಮ ಮಂದಿರ ರಾಮಲಲ್ಲಾ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಪ್ರಾಣಪ್ರತಿಷ್ಠಾಪನೆಗೆ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. 
ಅಯೋಧ್ಯೆ ರಾಮ ಮಂದಿರ ಗರ್ಭ ಗುಡಿ
ಅಯೋಧ್ಯೆ ರಾಮ ಮಂದಿರ ಗರ್ಭ ಗುಡಿ

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ರಾಮಲಲ್ಲಾ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಪ್ರಾಣಪ್ರತಿಷ್ಠಾಪನೆಗೆ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. 

ಮೂರ್ತಿ ಪ್ರತಿಷ್ಠಾಪನೆಯ ದಿನ ಬೃಹತ್ ದೀಪವನ್ನೂ ಸ್ಥಾಪಿಸಲಾಗುತ್ತದೆ ಹಾಗೂ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರಲಿವೆ. 

ಬೃಹತ್ ದೀಪವನ್ನು ರಾಮ್ ಘಾಟ್ ನಲ್ಲಿ ಸರಯೂ ನದಿಯ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಈ ರಾಮ್ ಘಾಟ್ ನ್ನು ರಾಮ ಸರಯುವಿನಲ್ಲಿ ದಿನನಿತ್ಯದ ಸ್ನಾನವನ್ನು ಮಾಡಿದ ನಂತರ ತನ್ನ ಕುಟುಂಬದೊಂದಿಗೆ ಧ್ಯಾನ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದ ಸ್ಥಳ ಎಂದು ಹೇಳಲಾಗುತ್ತದೆ.

ಈ ಬೃಹತ್ ದೀಪಕ್ಕೆ ದಶರಥ ದೀಪ ಎಂದು ನಾಮಕರಣ ಮಾಡಲಾಗಿದ್ದು, 28 ಮೀಟರ್ ವ್ಯಾಸ ಹೊಂದಿದ್ದು ಉರಿಯುವುದಕ್ಕೆ 21 ಕ್ವಿಂಟಾಲ್ ಎಣ್ಣೆ ಬೇಕಾಗುತ್ತದೆ.

ತಪಸ್ವಿನಿ ಚಾವ್ನಿಯ ಮಹಾಂತ್ ಪರಮಹಂಸ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದು, ದೀಪದ ತಯಾರಿ ಪೂರ್ಣಗೊಂಡ ನಂತರ ಅದನ್ನು ಜಗತ್ತಿನ ಅತಿ ದೊಡ್ಡ ದೀಪಸ್ತಂಭ ಎಂಬುದನ್ನು ಘೋಷಿಸುವುದಕ್ಕೆ ಟ್ರಸ್ಟ್ ಗಿನ್ನೀಸ್ ರೆಕಾರ್ಡ್ ನ ತಂಡವನ್ನು ಸಂಪರ್ಕಿಸಲಿದೆ ಎಂದು ಹೇಳಿದ್ದಾರೆ. ಚಾರ್‌ಧಾಮ್‌ನ ವಿವಿಧ ಯಾತ್ರಾ ಸ್ಥಳಗಳಿಂದ ತೆಗೆದ ಮಣ್ಣು ಮತ್ತು ರಾಷ್ಟ್ರದಾದ್ಯಂತ ವಿವಿಧ ನದಿಗಳು ಮತ್ತು ಸಾಗರಗಳಿಂದ ತೆಗೆದ ನೀರಿನಿಂದ 'ದಶರಥ ದೀಪ'ವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಹಂತ್ ಹೇಳಿದ್ದಾರೆ.

ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳನ್ನು ಆಧಾರವಾಗಿಟ್ಟುಕೊಂಡು ದೀಪವನ್ನು ವಿನ್ಯಾಸಗೊಳಿಸಲಾಗಿದ್ದು, 7.5 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ದೀಪದ ಬತ್ತಿಗೆ 1.25 ಕ್ವಿಂಟಾಲ್ ನಷ್ಟು ಹತ್ತಿ ಬೇಕಾಗುತ್ತದೆ ಎಂದು ಮಹಾಂತ್ ಪರಮಹಂಸ ದಾಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com