10 ವರ್ಷಗಳಲ್ಲಿ ಭಾರತದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ಶೇ. 112ರಷ್ಟು ಹೆಚ್ಚಳ: ಸಚಿವ ಮನ್ಸುಖ್ ಮಾಂಡವಿಯಾ

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಎಂಬಿಬಿಎಸ್ ಮತ್ತು ಪಿಜಿ ಸೀಟುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಎಂಬಿಬಿಎಸ್ ಮತ್ತು ಪಿಜಿ ಸೀಟುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ದೇಶದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 1,08,940ಕ್ಕೆ ಅಂದರೆ ಶೇಕಡ 112ರಷ್ಟು ಹೆಚ್ಚಳ ಮತ್ತು ಪಿಜಿ ಸೀಟುಗಳು 70,674ಕ್ಕೆ ಏರಿದೆ ಎಂದು ಸಚಿವರು ಹೇಳಿದರು.

2014ರವರೆಗೆ ದೇಶದಲ್ಲಿ 51,348 ಎಂಬಿಬಿಎಸ್ ಸೀಟುಗಳಿದ್ದವು. 2014ರಿಂದ ಕೇವಲ 10 ವರ್ಷಗಳಲ್ಲಿ 57,592 ಹೆಚ್ಚಿನ ಸ್ಥಾನಗಳನ್ನು ಸೇರಿಸಲಾಗಿದೆ ಎಂದು ಸಚಿವರು ಎಕ್ಸ್ ನಲ್ಲಿ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.

2014 ರಿಂದ 2024ರವರೆಗೆ ಕಳೆದ ದಶಕದಲ್ಲಿ 39,489 ಪಿಜಿ ಸೀಟುಗಳನ್ನು ಹೆಚ್ಚಿಸಲಾಗಿದೆ. 65 ವರ್ಷಗಳಲ್ಲಿ ದೇಶದಲ್ಲಿ ಕೇವಲ 31,185 ಪಿಜಿ ಸೀಟುಗಳಿದ್ದವು. ಈಗ, ಈ ಹೆಚ್ಚುವರಿ ಸೀಟುಗಳೊಂದಿಗೆ, ದೇಶದಲ್ಲಿ ನೀಡಲಾಗುವ ಒಟ್ಟು ಪಿಜಿ ಸೀಟುಗಳು 70,674 ಆಗಿದೆ. ಈ 10 ವರ್ಷಗಳಲ್ಲಿ ದೇಶದಲ್ಲಿ ಪಿಜಿ ಸೀಟುಗಳಲ್ಲಿ ಶೇ.127ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ಕಳೆದ ತಿಂಗಳು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ ಭಾರತಿ ಪ್ರವೀಣ್ ಪವಾರ್ ಅವರು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಅಡಿಯಲ್ಲಿ 157 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೂರು ಹಂತಗಳಲ್ಲಿ ಅನುಮೋದಿಸಲಾಗಿದೆ ಎಂದು ಹೇಳಿದರು. ಒಟ್ಟು 157ರಲ್ಲಿ 108 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com