ನಾಗ್ಪುರದ ಐಸ್ ಉತ್ಪಾದನಾ ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಸಾವು, ಮೂವರಿಗೆ ಗಾಯ

ಉಪ್ಪಲವಾಡಿ ಪ್ರದೇಶದಲ್ಲಿರುವ ಐಸ್ ತಯಾರಿಕೆಯ ಬಾಲಾಜಿ ಐಸ್ ಫ್ಯಾಕ್ಟರಿಯಲ್ಲಿ ಇಂದು ಸಂಜೆ 5.30ರ ಸುಮಾರಿಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಗ್ಪುರ: ಉಪ್ಪಲವಾಡಿ ಪ್ರದೇಶದಲ್ಲಿರುವ ಐಸ್ ತಯಾರಿಕೆಯ ಬಾಲಾಜಿ ಐಸ್ ಫ್ಯಾಕ್ಟರಿಯಲ್ಲಿ ಇಂದು ಸಂಜೆ 5.30ರ ಸುಮಾರಿಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು ಮೂವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.

ಅಮೋನಿಯಾ ಗ್ಯಾಸ್ ಟ್ಯಾಂಕ್‌ನಲ್ಲಿನ ಸೋರಿಕೆಯಿಂದ ಉಂಟಾದ ಸ್ಫೋಟವು ಎಷ್ಟು ಶಕ್ತಿಯುತವಾಗಿದೆ ಎಂದರೆ ಅದು ಹತ್ತಿರದ ಮನೆಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳಿಗೂ ಹಾನಿಯಾಗಿದ್ದು ಸ್ಥಳೀಯರಲ್ಲಿ ಭಯವನ್ನು ಉಂಟುಮಾಡಿತು.

ಆರಂಭಿಕ ವರದಿಗಳ ಪ್ರಕಾರ, ಉಸಿರುಗಟ್ಟುವಿಕೆ ಮತ್ತು ಉಸಿರಾಟದ ತೊಂದರೆ ತಪ್ಪಿಸಲು ಹತ್ತಿರದಲ್ಲೇ ವಾಸಿಸುವ ಅನೇಕ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿದ್ದಾರೆ.

ಕಾರ್ಖಾನೆಯ ಅಧಿಕಾರಿಗಳು ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸದಿರಬಹುದು. ಅಮೋನಿಯಾ ಅನಿಲವನ್ನು ನಿರ್ವಹಿಸುವಲ್ಲಿ ನಿಗದಿತ ಮಾನದಂಡಗಳನ್ನು ಅನುಸರಿಸದಿರುವುದು ದೊಡ್ಡ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com