ರಾಮಮಂದಿರ ನಿರ್ಮಾಣಕ್ಕೆ ನಡೆದ ಆಂದೋಲನ ದೇಶದ ಸ್ವಾತಂತ್ರ್ಯ ಚಳವಳಿಗಿಂತ ದೊಡ್ಡದು: ವಿಹೆಚ್ ಪಿ ನಾಯಕ

1947ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನಕ್ಕಿಂತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನ ದೊಡ್ಡದು ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕ ಶರದ್ ಶರ್ಮಾ ವ್ಯಾಖ್ಯಾನಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಕಾರ್ಯ
ರಾಮ ಮಂದಿರ ನಿರ್ಮಾಣ ಕಾರ್ಯ
Updated on

ಲಕ್ನೋ: 1947ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನಕ್ಕಿಂತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನ ದೊಡ್ಡದು ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕ ಶರದ್ ಶರ್ಮಾ ವ್ಯಾಖ್ಯಾನಿಸಿದ್ದಾರೆ.

ಆಂದೋಲನಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಭಗವಾನ್ ರಾಮಲಲ್ಲಾ ಮಂದಿರದ ನಿರ್ಮಾಣಕ್ಕೆ ಅಂತಿಮ ರೂಪ ನೀಡಲು ಸುಮಾರು 500 ವರ್ಷಗಳು ಬೇಕಾಯಿತು ಎಂದು ಹೇಳಿದರು. 

"ರಾಮ ಮಂದಿರ ಆಂದೋಲನವು ಸ್ವಾತಂತ್ರ್ಯ ಚಳವಳಿಗಿಂತ ದೊಡ್ಡ ಚಳವಳಿಯಾಗಿದೆ. ಇದು ಧಾರ್ಮಿಕ ಚಳವಳಿಯಾಗಿದ್ದು, ಧರ್ಮ, ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಸಂಬಂಧಿಸಿದ ಜನರು ಭಾಗವಹಿಸಿ ಅದನ್ನು ಪರಾಕಾಷ್ಠೆಗೆ ತಂದರು. ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದರು. ಇದು 500 ವರ್ಷಗಳನ್ನು ತೆಗೆದುಕೊಂಡಿತು. ಇದು 1947ಕ್ಕಿಂತ ದೊಡ್ಡ ಚಳವಳಿ ಎಂದು ಭಾವಿಸಬಹುದು ಎಂದು ಶರ್ಮಾ ಹೇಳಿದರು.

ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಭಗವಾನ್ ರಾಮ್ ಲಲ್ಲಾ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಒಟ್ಟು 7,000 ಆಮಂತ್ರಣ ಪತ್ರಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

"ದೇಶದ ಸುಮಾರು ನಾಲ್ಕು ಸಾವಿರ ಸಂತರು ಮತ್ತು ಮೂರು ಸಾವಿರ ಇತರ ಜನರನ್ನು ಆಹ್ವಾನಿಸಲಾಗುತ್ತಿದೆ". ಮಹಾಮಸ್ತಕಾಭಿಷೇಕ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ, ಅದರ ಮೊದಲ ಪುಟದಲ್ಲಿ ಭಗವಾನ್ ರಾಮ ಲಲ್ಲಾ ಅವರ ಚಿತ್ರವಿದೆ. ಅಲ್ಲದೆ, ಕಾರ್ಯಕ್ರಮದ ವಿವಿಧ ದಿನಾಂಕಗಳು ಮತ್ತು ವಿವರಗಳನ್ನು ನಮೂದಿಸಲಾಗಿದೆ ಎಂದು ಅವರು ಹೇಳಿದರು.

ಇದರ ಹೊರತಾಗಿ, ನಾವು 1949 ರಿಂದ ರಾಮಮಂದಿರ ಚಳವಳಿಯಲ್ಲಿ ಪಾತ್ರವಹಿಸಿದ ಜನರ ಬಗ್ಗೆ ಒಂದು ಕಿರುಪುಸ್ತಕವನ್ನು ಒದಗಿಸುತ್ತಿದ್ದೇವೆ. ಈಗಿನ ಪೀಳಿಗೆಗೆ, ಅವರು ಚಳವಳಿಯ ಭಾಗವಾಗಿದ್ದ ದಂತಕಥೆಗಳ ಬಗ್ಗೆ ತಿಳಿಯುತ್ತಾರೆ ಎಂದರು. 

ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com