ಮುಂಬೈ ಎಟಿಎಸ್ ನಿಂದ 6 ಮಂದಿಯ ಬಂಧನ, ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ

ಮುಂಬೈ ನ ಭಯೋತ್ಪಾದನೆ ನಿಗ್ರಹ ದಳ 6 ಮಂದಿಯನ್ನು ಬಂಧಿಸಿದ್ದು,  ಬಂಧಿತರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈ ಎಟಿಎಸ್
ಮುಂಬೈ ಎಟಿಎಸ್

ಮುಂಬೈ: ಮುಂಬೈ ನ ಭಯೋತ್ಪಾದನೆ ನಿಗ್ರಹ ದಳ 6 ಮಂದಿಯನ್ನು ಬಂಧಿಸಿದ್ದು,  ಬಂಧಿತರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಬೊರಿವಲಿ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರು ದೆಹಲಿಯ ನಿವಾಸಿಗಳಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

"ಭಯೋತ್ಪಾದನಾ ನಿಗ್ರಹ ದಳದ ಮುಂಬೈ ಘಟಕವು ಮುಂಬೈನ ಬೊರಿವಲಿ ಪ್ರದೇಶದಲ್ಲಿನ ಅತಿಥಿ ಗೃಹದ ಮೇಲೆ ದಾಳಿ ನಡೆಸಿತ್ತು. 6 ಜನರನ್ನು ಬಂಧಿಸಿ ಅವರಿಂದ 3 ಬಂದೂಕುಗಳು ಮತ್ತು 36 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ" ಎಂದು ಎಟಿಎಸ್ ತಿಳಿಸಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com