ಬಾಲಿವುಡ್ ನಟಿ ರಾಧಿಕಾ ಆಫ್ಟೆ
ಬಾಲಿವುಡ್ ನಟಿ ರಾಧಿಕಾ ಆಫ್ಟೆ

ಏರೋಬ್ರಿಡ್ಜ್‌ನಲ್ಲಿ ಗಂಟೆಗಟ್ಟಲೆ ಪ್ರಯಾಣಿಕರು ಲಾಕ್: ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ರಾಧಿಕಾ ಆಪ್ಟೆ! 

ವಿಮಾನವೊಂದರ ಪ್ರಯಾಣಿಕರು ಏರೋ ಬ್ರಿಡ್ಜ್ ನಲ್ಲಿ ಧೀರ್ಘ ಸಮಯದವರೆಗೆ ಕಾಯಬೇಕಾದ ಘಟನೆ ಕುರಿತು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  
Published on

ಮುಂಬೈ: ವಿಮಾನವೊಂದರ ಪ್ರಯಾಣಿಕರು ಏರೋ ಬ್ರಿಡ್ಜ್ ನಲ್ಲಿ ಧೀರ್ಘ ಸಮಯದವರೆಗೆ ಕಾಯಬೇಕಾದ ಘಟನೆ ಕುರಿತು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಬದ್ಲಾಪುರ್, ಅಂಧಧುನ್, ಪ್ಯಾಡ್ ಮ್ಯಾನ್ ಮತ್ತು ಲಸ್ಟ್ ಸ್ಟೋರೀಸ್ ಚಿತ್ರಗಳಿಂದ ಫೇಮಸ್ ಆಗಿರುವ ನಟಿ,  ನಗರ, ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆ ಹೆಸರಿಸದೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಿಗ್ಗೆ 8:30ಕ್ಕೆ ವಿಮಾನದಲ್ಲಿ ತೆರಳಬೇಕಾಗಿತ್ತು. ಆದರೆ, 10-50 ಆದರೂ ವಿಮಾನ ಹೊರಡಲೇ ಇಲ್ಲ.  ಎಲ್ಲಾ ಪ್ರಯಾಣಿಕರನ್ನು ಏರೋಬ್ರಿಡ್ಜ್‌ಗೆ ಹಾಕಿಲಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ವಿಡಿಯೋವೊಂದನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಪ್ರಯಾಣಿಕರು ಲಾಕ್ ಮಾಡಿದ ಗಾಜಿನ ಬಾಗಿಲಿನ ಹಿಂದೆ ಕಾಣಿಸಿಕೊಂಡಿದ್ದಾರೆ. ಮಕ್ಕಳು ಮತ್ತು ವೃದ್ಧರನ್ನೊಳಗೊಂಡ ಪ್ರಯಾಣಿಕರನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಲಾಯಿತು.  ಬಾಗಿಲು ತೆರೆಯಲು ಭದ್ರತಾ ಸಿಬ್ಬಂದಿ ನಿರಾಕರಿಸಿದರು  ಎಂದು 38 ವರ್ಷದ ನಟಿ ಹೇಳಿದ್ದಾರೆ. 

 ಆಪ್ಟೆ ಸದ್ಯ ಶ್ರೀರಾಮ್ ರಾಘವನ್ ಅವರ 'ಮೆರ್ರಿ ಕ್ರಿಸ್ಮಸ್' ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com