ರಾಮ ಪ್ರಾಣ ಪ್ರತಿಷ್ಠಾ ಸಮಾರಂಭ: ಹಿರಿಯ ನಟಿ ಹೇಮಾಮಾಲಿನಿಯಿಂದ ರಾಮಾಯಣ ಆಧಾರಿತ ನೃತ್ಯ ರೂಪಕ!

ಅಯೋಧ್ಯೆಯಲ್ಲಿ  ಇದೇ ತಿಂಗಳ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಅಂಗವಾಗಿ ಬಿಜೆಪಿ ಸಂಸದರು ಆಗಿರುವ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಅವರಿಂದ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ನೃತ್ಯ ರೂಪಕವನ್ನು ಆಯೋಜಿಸಲಾಗಿದೆ.
ಹೇಮಾಮಾಲಿನಿ
ಹೇಮಾಮಾಲಿನಿ

ಅಯೋಧ್ಯೆ: ಅಯೋಧ್ಯೆಯಲ್ಲಿ  ಇದೇ ತಿಂಗಳ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಅಂಗವಾಗಿ ಬಿಜೆಪಿ ಸಂಸದರು ಆಗಿರುವ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಅವರಿಂದ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ನೃತ್ಯ ರೂಪಕವನ್ನು ಆಯೋಜಿಸಲಾಗಿದೆ. ಈ ಕುರಿತು ಅವರು ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.

ಜನರು ವರ್ಷಗಳಿಂದ ಕಾಯುತ್ತಿದ್ದ ರಾಮಮಂದಿರದ ಪ್ರಾಣಪ್ರತಿಷ್ಠೆಯ ಸಮಯದಲ್ಲಿ ಮೊದಲ ಬಾರಿಗೆ ಅಯೋಧ್ಯೆಗೆ ಬರುತ್ತಿದ್ದೇನೆ. ಜನವರಿ 17 ರಂದು ಅಯೋಧ್ಯಾಧಾಮದಲ್ಲಿ ರಾಮಾಯಣ ಆಧಾರಿತ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದೇನೆ ಎಂದು ತಿಳಿಸಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ರಾಮ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶ, ವಿದೇಶದಿಂದ ಹಲವಾರು ವಿವಿಐಪಿಗಳಿಗೆ ಆಹ್ವಾನ ನೀಡಲಾಗಿದೆ.

ರಾಮ ಲಲ್ಲಾ  ಪ್ರಾಣ-ಪ್ರತಿಷ್ಠಾ ಪ್ರಧಾನ ಸಮಾರಂಭದ ಒಂದು ವಾರದ ಮೊದಲು ವೈದಿಕ ಆಚರಣೆಗಳು ಜನವರಿ 16 ರಂದು ಪ್ರಾರಂಭವಾಗುತ್ತವೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾ ಅವರ ಪಟ್ಟಾಭಿಷೇಕದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com