ಮದ್ಯ ನೀತಿ ಪ್ರಕರಣ: ಬಿಆರ್ ಎಸ್ ನಾಯಕಿ ಕೆ ಕವಿತಾಗೆ ಇಡಿ ಸಮನ್ಸ್
ನವದೆಹಲಿ: ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ ಬಿಆರ್ ಎಸ್ ನಾಯಕಿ ಕೆ ಕವಿತಾಗೆ ಸಮನ್ಸ್ ಜಾರಿಗೊಳಿಸಿದೆ.
ದೆಹಲಿಯ ಮದ್ಯ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಮಂಗಳವಾರದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
45 ವರ್ಷಗಳ ಕೆ ಕವಿತಾ ತೆಲಂಗಾಣ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಪುತ್ರಿಯಾಗಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಕವಿತಾ ತನಿಖಾಧಿಕಾರಿಗಳಿಗೆ ಇ-ಮೇಲ್ ಮೂಲಕ ತಲುಪಿಸಿದ್ದಾರೆ. "ಈ ಪ್ರಕರಣದಲ್ಲಿ ಇಡಿ ಕೆ ಕವಿತಾ ಅವರನ್ನು ಕರೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ" ಎಂದು ಅವರ ವಕೀಲ ನಿತೇಶ್ ರಾಣಾ ಪಿಟಿಐಗೆ ತಿಳಿಸಿದ್ದಾರೆ.
ಬಿಆರ್‌ಎಸ್ ನಾಯಕ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ತಡೆಯನ್ನು ಪಡೆದಿದ್ದರು ಅದು ಈಗ ಮಾನ್ಯವಾಗಿಲ್ಲ ಎಂದು ಜಾರಿ ನಿರ್ದೇಶನಲಾಯದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಈ ಪ್ರಕರಣದಲ್ಲಿ ಆಕೆಯನ್ನು ಮೂರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು ಮತ್ತು ಕೇಂದ್ರ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ