ಪ್ರಧಾನಿಗಳ ಮ್ಯೂಸಿಯಂ ನಲ್ಲಿ ಮೋದಿ ಗ್ಯಾಲರಿಗೆ ಭೇಟಿ ನೀಡಿದ ಮೊದಲ ಸಂದರ್ಶಕಿ ದ್ರೌಪದಿ ಮುರ್ಮು!

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿಗಳ ಮ್ಯೂಸಿಯಂ ನಲ್ಲಿ ನರೇಂದ್ರ ಮೋದಿ ಗ್ಯಾಲರಿಗೆ ಭೇಟಿ ನೀಡಿದ ಮೊದಲ ಸಂದರ್ಶಕರಾಗಿದ್ದಾರೆ. 
ಪ್ರಧಾನಿ ಮೋದಿ- ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಧಾನಿ ಮೋದಿ- ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿಗಳ ಮ್ಯೂಸಿಯಂ ನಲ್ಲಿ ನರೇಂದ್ರ ಮೋದಿ ಗ್ಯಾಲರಿಗೆ ಭೇಟಿ ನೀಡಿದ ಮೊದಲ ಸಂದರ್ಶಕರಾಗಿದ್ದಾರೆ. 

ಈ ಮ್ಯೂಸಿಯಂ ಗೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯನಿಗೂ ಸಹ ಹೆಮ್ಮೆಯಾಗಲಿದೆ ಎಂದು ರಾಷ್ಟ್ರಪತಿಗಳು ತಿಳಿಸಿದ್ದಾರೆ. 

ಜ.16 ರಿಂದ ಸಾರ್ವಜನಿಕ ಭೇಟಿಗೆ ಮುಕ್ತವಾಗಲಿರುವ ಮ್ಯೂಸಿಯಂ ನ ನರೇಂದ್ರ ಮೋದಿ ಗ್ಯಾಲರಿಗೆ ಭೇಟಿ ನೀಡಿದ ಮೊದಲ ಸಂದರ್ಶಕರೆಂಬ ಖ್ಯಾತಿಗೆ ಮುರ್ಮು ಭಾಜನರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಕೃತಿ ಇಲಾಖೆ,  ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು 'ಅಲ್ಲಿನ ಪ್ರದರ್ಶನಗಳನ್ನು ಆಳವಾದ ಆಸಕ್ತಿಯಿಂದ ನೋಡಿದ್ದಾರೆ' ಎಂದು ಹೇಳಿದೆ.

ಒಂದುವರೆ ಗಂಟೆಯ ಭೇಟಿ ವೇಳೆಯಲ್ಲಿ ಮುರ್ಮು ಅವರು,  ಸಂವಿಧಾನ ಗ್ಯಾಲರಿಗೂ ಭೇಟಿ ನೀಡಿದ್ದರು.  ಅಧ್ಯಕ್ಷರು ಸಂಗ್ರಹಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.

'ಇಲ್ಲಿಗೆ ಬಂದು ಸಂಗ್ರಹಾಲಯದ ವಿವಿಧ ಗ್ಯಾಲರಿಗಳನ್ನು ನೋಡುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹೆಮ್ಮೆ ಪಡುತ್ತಾನೆ ಎಂದು ನನಗೆ ಮನವರಿಕೆಯಾಗಿದೆ' ಎಂದು ಅವರು ಬರೆದಿದ್ದಾರೆ.

ಇಲ್ಲಿನ ಪ್ರಧಾನಮಂತ್ರಿ ಸಂಗ್ರಹಾಲಯದ ನೆಲ ಮಹಡಿಯಲ್ಲಿ 'ನರೇಂದ್ರ ಮೋದಿ ಗ್ಯಾಲರಿ' ಇದೆ ಮತ್ತು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಕೆಲವು ದಿನಗಳ ಮೊದಲು ಇದರ ಉದ್ಘಾಟನೆ ನಡೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com