ಕೇರಳ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ, ಪುನೀತರಾದ ಲಕ್ಷಾಂತರ ಭಕ್ತರು!

ಮಕರ ಸಂಕ್ರಾಂತಿಯಂದು ಕೇರಳದ ಅಯ್ಯಪ್ಪನ ಸನ್ನಿಧಿ  ಶಬರಿಮಲೆಯಲ್ಲಿ ಸಂಭವಿಸುವ ಮಕರ ಜ್ಯೋತಿ (ಮಕರ ವಿಳಕ್ಕು) ಕಂಡು ಲಕ್ಷಾಂತರ ಭಕ್ತರು ಪುನೀತರಾದರು. 
ಮಕರ ಜ್ಯೋತಿ ದರ್ಶನ
ಮಕರ ಜ್ಯೋತಿ ದರ್ಶನ
Updated on

ಶಬರಿಮಲೆ: ಮಕರ ಸಂಕ್ರಾಂತಿಯಂದು ಕೇರಳದ ಅಯ್ಯಪ್ಪನ ಸನ್ನಿಧಿ  ಶಬರಿಮಲೆಯಲ್ಲಿ ಸಂಭವಿಸುವ ಮಕರ ಜ್ಯೋತಿ (ಮಕರ ವಿಳಕ್ಕು) ಕಂಡು ಲಕ್ಷಾಂತರ ಭಕ್ತರು ಪುನೀತರಾದರು. 

ಸೋಮವಾರ ಸಂಜೆ 6.48ರ ಸುಮಾರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಎದುರಿನ ಪೊನ್ನಂಬಲಮೇಡುವಿನಲ್ಲಿ ಮೂರು ಬಾರಿ ಜ್ಯೋತಿ ದರ್ಶನವಾಗಿದೆ. ಈ ವೇಳೆ ಭಕ್ತರು ಅಯ್ಯಪ್ಪ ನಾಮ ಸ್ಮರಣೆ ಮಾಡುತ್ತಾ ಸಂತಸಪಟ್ಟರು.

ಸಂಕ್ರಾಂತಿ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸುಸೂತ್ರವಾಗಿ ಮಕರ ಜ್ಯೋತಿ ದರ್ಶನ ಪಡೆಯಲು ಶಬರಿಮಲೆಯ ಹಲವೆಡೆ ವ್ಯವಸ್ಥೆ ಮಾಡಲಾಗಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com