ಬಿಹಾರ ಮೈತ್ರಿ ಸರ್ಕಾರದಲ್ಲಿ ಭಿನ್ನಮತ?: ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದೇನು ಅಂದರೆ...

ಬಿಹಾರದ ಮೈತ್ರಿ ಸರ್ಕಾರದಲ್ಲಿ ಭಿನ್ನ ಮತ ಎದುರಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. 
ಬಿಹಾರ ಸಿಎಂ ನಿತೀಶ್ ಕುಮಾರ್- ಡಿಸಿಎಂ ತೇಜಸ್ವಿ ಯಾದವ್
ಬಿಹಾರ ಸಿಎಂ ನಿತೀಶ್ ಕುಮಾರ್- ಡಿಸಿಎಂ ತೇಜಸ್ವಿ ಯಾದವ್

ಪಾಟ್ನ: ಬಿಹಾರದ ಮೈತ್ರಿ ಸರ್ಕಾರದಲ್ಲಿ ಭಿನ್ನ ಮತ ಎದುರಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಲೋಕಸಭಾ ಚುನಾವಣೆಗೆ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಹಾರದ ಜೆಡಿಯು- ಆರ್ ಜೆಡಿ, ಕಾಂಗ್ರೆಸ್ ಪಕ್ಷಗಳ ನಡುವೆ  ಭಿನ್ನಮತ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತ ವರದಿಗಳನ್ನು  ಡಿಸಿಎಂ ತೇಜಸ್ವಿ ಯಾದವ್ ತಳ್ಳಿಹಾಕಿದ್ದಾರೆ.

ಮಕರ ಸಂಕ್ರಾಂತಿ ಅಂಗವಾಗಿ ದಹಿ-ಚುರಾ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿ ಯಾದವ್,  ಮಹಾಮೈತ್ರಿಕೂಟದ ಎರಡು ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ  ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳು ಆಧಾರ ರಹಿತ ಎಂದು ಹೇಳಿದ್ದಾರೆ. 

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ, “ಯಾರಾದರೂ ಸೀಟು ಹಂಚಿಕೆಯನ್ನು ಏಕೆ ಸ್ಪಷ್ಟಪಡಿಸಬೇಕು? ಎಷ್ಟು ದಿನಗಳಿಂದ ಈ ಊಹಾಪೋಹ? ಸೀಟು ಹಂಚಿಕೆಯಲ್ಲಿ ಆರ್‌ಜೆಡಿ ಮತ್ತು ಜೆಡಿಯು ನಡುವಿನ ಭಿನ್ನಾಭಿಪ್ರಾಯಗಳ ಸಮಸ್ಯೆ ಇಲ್ಲ. ಅದರ ಬಗ್ಗೆ ಚಿಂತೆ ಬೇಡ, ಸೀಟು ಹಂಚಿಕೆ ಯಾವಾಗ ಆಗುತ್ತದೆಯೋ ಆಗ ನಿಮಗೆ ತಿಳಿಯಲಿದೆ" ಎಂದು ಹೇಳಿದ್ದಾರೆ. 

ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆರ್‌ಜೆಡಿ ನಾಯಕ, “ಮಹಾಮೈತ್ರಿಕೂಟ ರಚನೆಯಾದಾಗಿನಿಂದಲೂ ಬಿಜೆಪಿ ತಳಮಳಗೊಂಡಿದೆ. ಮಹಾಮೈತ್ರಿಕೂಟದ ಆಡಳಿತದಲ್ಲಿ ರಾಜ್ಯದಲ್ಲಿ ಎಷ್ಟು ಉದ್ಯೋಗ ನೀಡಲಾಗಿದೆ ಗೊತ್ತಾ? ಮೀಸಲಾತಿ ಕೋಟಾವನ್ನು ಹೆಚ್ಚಿಸಲಾಗಿದೆ, ಜಾತಿವಾರು ಸಮೀಕ್ಷೆ ನಡೆಸಲಾಗಿದೆ ಮತ್ತು ಸ್ವ-ಸಹಾಯ ಗುಂಪುಗಳ ಗೌರವಧನವನ್ನು ಹೆಚ್ಚಿಸಲಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com