ಬಿಜೆಪಿ vs ಇಂಡಿಯಾ ಮೈತ್ರಿಕೂಟದ ಮೊದಲ ಪಂದ್ಯ ಗುರುವಾರ ಆರಂಭ!

ಜನವರಿ 18 ರಂದು ನಡೆಯಲಿರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಜೊತೆಯಾಗಿ ಸ್ಪರ್ಥಿಸಲು ನಿರ್ಧರಿಸಿದ್ದು, ಇದು ಬಿಜೆಪಿ vs ಇಂಡಿಯಾ ಮೈತ್ರಿಕೂಟದ ಮೊದಲ ಪಂದ್ಯವಾಗಿದೆ.
ಕಾಂಗ್ರೆಸ್, ಎಎಪಿ ಉನ್ನತ ನಾಯಕರ ಚಿತ್ರ
ಕಾಂಗ್ರೆಸ್, ಎಎಪಿ ಉನ್ನತ ನಾಯಕರ ಚಿತ್ರ

ನವದೆಹಲಿ: ಜನವರಿ 18 ರಂದು ನಡೆಯಲಿರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಜೊತೆಯಾಗಿ ಸ್ಪರ್ಥಿಸಲು ನಿರ್ಧರಿಸಿದ್ದು, ಇದು ಬಿಜೆಪಿ vs ಇಂಡಿಯಾ ಮೈತ್ರಿಕೂಟದ ಮೊದಲ ಪಂದ್ಯವಾಗಿದೆ. ಈ ಚುನಾವಣೆಯು ರಾಜಕೀಯದ ಚಿತ್ರಣ ಮತ್ತು ದಿಕ್ಕನ್ನು ಬದಲಾಯಿಸುತ್ತದೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಮಂಗಳವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, ಜನವರಿ 18 ರಂದು ನಡೆಯಲಿರುವ ಚಂಡೀಗಢ ಮೇಯರ್ ಚುನಾವಣೆ ಸಾರ್ವತ್ರಿಕ ಚುನಾವಣೆಯಲ್ಲ, ಇದು ಈ ದೇಶದ ರಾಜಕೀಯದ ಚಿತ್ರಣ ಮತ್ತು ದಿಕ್ಕನ್ನು ಬದಲಾಯಿಸುವ ಚುನಾವಣೆಯಾಗಿದೆ. ಇದು ಅಡಿಪಾಯ ಹಾಕಲಿದೆ ಎಂದು ಭಾವಿಸುತ್ತೇನೆ. ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಮೊದಲ ಬಾರಿಗೆ ಬಿಜೆಪಿಯನ್ನು ಚುನಾವಣಾ ರಣರಂಗದಲ್ಲಿ ಎದುರಿಸಲಿದೆ. ಇದು ಬಿಜೆಪಿ ಮತ್ತು ಭಾರತದ ಮೊದಲ ಪಂದ್ಯವಾಗಿದೆ ಎಂದರು. 

ಇಂಡಿಯಾ ಮೈತ್ರಿಕೂಟ ಈ ಚುನಾವಣೆಯಲ್ಲಿ ಪೂರ್ಣ ಶಕ್ತಿಯೊಂದಿಗೆ ಹೋರಾಡಿ, ಐತಿಹಾಸಿಕ ಮತ್ತು ನಿರ್ಣಾಯಕ ವಿಜಯವನ್ನು ದಾಖಲಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಇಂಡಿಯಾ ಮೈತ್ರಿಕೂಟದ ಈ ವಿಜಯ ರಥ ಚಂಡೀಗಢದವರೆಗೆ ಮಾತ್ರ ನಿಲ್ಲುವುದಿಲ್ಲ, ಇದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ  ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ರಾಘವ್ ಚಡ್ಡಾ, ಈಗ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುವುದು ಸರಿಯಲ್ಲ. ಮೈತ್ರಿಕೂಟವು ದೇಶದ ವಿವಿಧ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಒಟ್ಟಿಗೆ ಸೇರಲು ನಿರ್ಧರಿಸಿದೆ. ದೇಶದ ಹಿತಾಸಕ್ತಿ, ಸೀಟು ಹಂಚಿಕೆ ಕುರಿತು ಇಂದು ನಿಯಮಿತ ಟೀಕೆ ಮಾಡುವುದು ಸೂಕ್ತವಲ್ಲ, ಯಾವುದೇ ಮಹತ್ವದ ನಿರ್ಧಾರ ಕೈಗೊಂಡ ತಕ್ಷಣ ಅದರ ಮಾಹಿತಿ ತಿಳಿಯಲಿದೆ  ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com