ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್
ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್

ಪಂಜಾಬ್ ಸಿಎಂಗೆ ಕೊಲೆ ಬೆದರಿಕೆ ಹಾಕಿದ ಖಲಿಸ್ಥಾನ ಪ್ರತ್ಯೇಕತಾವಾದಿ ಪನ್ನುನ್; ಭದ್ರತೆ ಬಿಡಲು ಪ್ರಧಾನಿಗೆ ಸವಾಲು!

ಖಲಿಸ್ಥಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಜ.26 ರಂದು 75 ನೇ ಗಣರಾಜ್ಯ ದಿನಾಚರಣೆಗೂ ಮುನ್ನ ಪನ್ನುನ್ ಈ ಬೆದರಿಕೆ ಹಾಕಿದ್ದಾನೆ.

ನವದೆಹಲಿ: ಖಲಿಸ್ಥಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಜ.26 ರಂದು 75 ನೇ ಗಣರಾಜ್ಯ ದಿನಾಚರಣೆಗೂ ಮುನ್ನ ಪನ್ನುನ್ ಈ ಬೆದರಿಕೆ ಹಾಕಿದ್ದಾನೆ.

ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (ಎಸ್ ಎಫ್ ಜೆ) ವೆಬ್ ಸೈಟ್ ನಲ್ಲಿ ಭದ್ರತೆ ಇಲ್ಲದೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿಗೆ ಪನ್ನುನ್ ಸವಾಲೆಸೆದಿದ್ದಾನೆ.

ಇದಷ್ಟೇ ಅಲ್ಲದೇ ಗ್ಯಾಂಗ್ಸ್ಟರ್ ಗಳಿಗೆ ಪಂಜಾಬ್ ಸಿಎಂ, ಡಿಜಿ ಗೌರವ್ ಯಾದವ್ ಅವರ ಮೇಲೆ ಗಣರಾಜ್ಯೋತ್ಸವ ದಿನದಂದು ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದಾನೆ.

ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ SFJ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ವೆಬ್ ಸೈಟ್ ನಲ್ಲಿ ಹಾಕಿರುವ ವೀಡಿಯೋದಲ್ಲಿ ಪನ್ನುನ್ ತಿಳಿಸಿದ್ದಾನೆ. ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದರೂ ಬೆದರಿಕೆಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

"ವೀಡಿಯೊಗಳ ಮೂಲಕ ಇಂತಹ ಬೆದರಿಕೆಗಳನ್ನು ನೀಡುವ ಮೂಲಕ ಪನ್ನುನ್ ಏನು ಮಾಡುತ್ತಾರೆ ಎಂಬುದು ಅವರ ಆತಿಥೇಯ ರಾಷ್ಟ್ರವಾದ ಅಮೇರಿಕಾ ಪನ್ನುನ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಅಂತಹ ಹೇಳಿಕೆಗಳನ್ನು ನೀಡುವುದನ್ನು ತಡೆಯುವುದಿಲ್ಲ ಎಂಬ ಅಂಶಕ್ಕಿಂತ ಕಡಿಮೆ ಆತಂಕಕಾರಿಯಾಗಿದೆ. ಭಾರತ ವಿರೋಧಿ ಮತ್ತು ಖಲಿಸ್ತಾನಿ ಪರ ಬರಹಗಳು ಅಮೇರಿಕಾ ಸೇರಿದಂತೆ ಇತರೆಡೆ ಇರುವ ಹಿಂದೂ ದೇವಾಲಯಗಳ ಸುತ್ತಲೂ ಹೆಚ್ಚಾಗಿ ಕಂಡುಬರುತ್ತವೆ ಎಂಬ ಆರೋಪ ಕೇಳಿಬಂದಿದೆ. 

ಪನ್ನೂನ್ ಈ ಹಿಂದೆಯೂ ಭಾರತೀಯ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಮತ್ತು ವಿಮಾನಯಾನ ಸಂಸ್ಥೆಗಳ ಮೇಲೆ ದಾಳಿ ಮಾಡುವುದಾಗಿ ಇದೇ ರೀತಿಯ ಬೆದರಿಕೆಗಳನ್ನು ಹಾಕಿದ್ದಾರೆ.

ಪ್ರಸ್ತುತ ಪ್ರೇಗ್‌ನ ಜೈಲಿನಲ್ಲಿರುವ ನಿಖಿಲ್ ಗುಪ್ತಾ ಎಂಬ ಭಾರತೀಯನ ವಿರುದ್ಧ ಅಮೇರಿಕಾ ಆರೋಪಗಳನ್ನು ಮಾಡಿದ್ದು, ಪನ್ನುನ್ ಹತ್ಯೆಗೆ ಈ ವ್ಯಕ್ತಿ ಸಂಚು ರೂಪಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com