ಕೇಜ್ರಿವಾಲ್ ದೆಹಲಿ ಅಬಕಾರಿ ಹಗರಣದ 'ಕಿಂಗ್‌ಪಿನ್': ಬಿಜೆಪಿ

ಜಾರಿ ನಿರ್ದೇಶನಾಲಯದ ಸಮನ್ಸ್‌ಗಳನ್ನು ಪದೇ ಪದೇ ನಿರ್ಲಕ್ಷಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕೇಜ್ರಿವಾಲ್ ಆಪಾದಿತ ಅಬಕಾರಿ ಹಗರಣದ 'ಕಿಂಗ್‌ಪಿನ್' ಆಗಿರುವುದರಿಂದಲೇ ಅವರಿಗೆ ಬಂಧನದ ಭಯವಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಜಾರಿ ನಿರ್ದೇಶನಾಲಯದ ಸಮನ್ಸ್‌ಗಳನ್ನು ಪದೇ ಪದೇ ನಿರ್ಲಕ್ಷಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕೇಜ್ರಿವಾಲ್ ಆಪಾದಿತ ಅಬಕಾರಿ ಹಗರಣದ 'ಕಿಂಗ್‌ಪಿನ್' ಆಗಿರುವುದರಿಂದಲೇ ಅವರಿಗೆ ಬಂಧನದ ಭಯವಿದೆ ಎಂದು ಆರೋಪಿಸಿದೆ.

ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ನೀಡಿದ ನಾಲ್ಕನೇ ಸಮನ್ಸ್ ಅನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದಾರೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಆರೋಪಿಯಲ್ಲದಿದ್ದರೆ ಅವರಿಗೆ ಏಕೆ ಸಮನ್ಸ್ ನೀಡಲಾಯಿತು ಎಂದು ಕೇಳಿದೆ.

ಪಕ್ಷದ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕೇಜ್ರಿವಾಲ್ ಅವರು ಚಳಿಗಾಲದಲ್ಲೂ 'ಬೆವರು' ಮತ್ತು 'ಭಯದಿಂದ ನಡುಗುತ್ತಿದ್ದಾರೆ'. ಏಕೆಂದರೆ ಅವರು ಅಬಕಾರಿ ಕಿಂಗ್‌ಪಿನ್ ಎಂದು ತಿಳಿದಿರುವ ಕಾರಣ ಅವರ ಬಂಧನದ ನಿರೀಕ್ಷೆಯಲ್ಲಿ ಇಡಿ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಕೇಜ್ರಿವಾಲ್‌ಗೆ ಇಡಿ ಸಮನ್ಸ್ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಭಾಟಿಯಾ, ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರು ಸಮನ್ಸ್‌ಗಳನ್ನು ನಿರ್ಲಕ್ಷಿಸುತ್ತಿರುವ ಬದಲು ತನಿಖಾ ಸಂಸ್ಥೆಯ ಸಮನ್ಸ್‌ಗಳನ್ನು ಪ್ರಶ್ನಿಸಿ ನ್ಯಾಯಾಲಯವನ್ನು ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು.

ಮದ್ಯದ ಹಗರಣದ ಕಿಂಗ್‌ಪಿನ್ ಕಂಬಿಗಳ ಹಿಂದೆ ಹೋಗುವುದು ಈಗ ಖಚಿತವಾಗಿದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com