ಮಣಿಪುರದ ಹಿಂಸಾಚಾರದಲ್ಲಿ ನಾಲ್ವರು ಗುಂಡೇಟಿಗೆ ಬಲಿ!

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು,  ಗುರುವಾರ ಸಂಜೆ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. 
ಮಣಿಪುರದ ಹಿಂಸಾಚಾರ
ಮಣಿಪುರದ ಹಿಂಸಾಚಾರ

ಮಣಿಪುರ: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು,  ಗುರುವಾರ ಸಂಜೆ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. 

ಬಿಷ್ಣುಪುರ ಜಿಲ್ಲೆಯ ನಿಂಗ್‌ತೌಖೋಂಗ್ ಖಾ ಖುನೌದಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಬಲಿಪಶುಗಳಲ್ಲಿ ಒಬ್ಬ ವ್ಯಕ್ತಿ ಮತ್ತು ಆತನ 60 ವರ್ಷದ ತಂದೆ ಸೇರಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸಿ, ಅಧಿಕಾರಿಯೊಬ್ಬರು, "ಕಾರ್ಮಿಕರು ಕೃಷಿ ಭೂಮಿಯಲ್ಲಿ ಉಳುತ್ತಿದ್ದಾಗ ಐದಾರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಂದು ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿದರು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಿದ, ದುಷ್ಕರ್ಮಿಗಳು ಅವರು ಬಂದ ಸ್ಥಳದಿಂದ ಬೆಟ್ಟದ ಶ್ರೇಣಿಗಳಿಗೆ ಓಡಿಹೋದರು ಇಂದು ಮೃತಪಟ್ಟ ನಾಲ್ವರೊಂದಿಗೆ, ಬುಧವಾರದಿಂದ ರಾಜ್ಯದ ಪ್ರತ್ಯೇಕ ಜಿಲ್ಲೆಗಳಲ್ಲಿ ಇಬ್ಬರು ಪೊಲೀಸ್ ಕಮಾಂಡೋಗಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com