ನವದೆಹಲಿ: ಸರ್ಕಾರಿ ಬಂಗಲೆ ಖಾಲಿ ಮಾಡಿದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ!

ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂಸತ್ತಿನಿಂದ ಉಚ್ಛಾಟನೆಗೊಂಡಿದ್ದ ಟಿಎಂಸಿಯ ಮಾಜಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ನವದೆಹಲಿಯ 9 ಬಿ, ಟೆಲಿಗ್ರಾಫ್ ಲೇನ್‌ನಲ್ಲಿರುವ ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ

ನವದೆಹಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂಸತ್ತಿನಿಂದ ಉಚ್ಛಾಟನೆಗೊಂಡಿದ್ದ ಟಿಎಂಸಿಯ ಮಾಜಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ನವದೆಹಲಿಯ 9 ಬಿ, ಟೆಲಿಗ್ರಾಫ್ ಲೇನ್‌ನಲ್ಲಿರುವ ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್ ನಿರ್ದೇಶನಾಲಯವು ಬೆಳಗ್ಗೆ ಮೆಹುವಾ ಅವರ ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು ತಂಡವೊಂದನ್ನು ಕಳುಹಿಸಿತ್ತು ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಆದರೆ, ಅಧಿಕಾರಿಗಳು ಬರುವ ಮೊದಲೇ ಇಂದು ಬೆಳಿಗ್ಗೆ 10 ಗಂಟೆಗೆ ಖಾಲಿ ಮಾಡಲಾಗಿದ್ದು, ಮನೆಯ ಕೀಯನ್ನು ಡಿಒಇ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೊಯಿತ್ರಾ ಅವರ ವಕೀಲ ಶಾದನ್ ಫರಾಸತ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ತಿಂಗಳು ಲೋಕಸಭೆಯಿಂದ ಹೊರಹಾಕಲ್ಪಟ್ಟ ಮೊಯಿತ್ರಾಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಈ ವಾರದ ಆರಂಭದಲ್ಲಿ ಡಿಒಇ ನೋಟಿಸ್ ನೀಡಿತು. ಸರ್ಕಾರಿ ಬಂಗಲೆ ತೆರವು ಮಾಡುವ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಒತ್ತಾಯಿಸಿ ಮಹುವಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿತು. 

ಸಂಸದರು ಶಾಸಕರಾಗುವುದನ್ನು ನಿಲ್ಲಿಸಿದ ನಂತರ ಅವರನ್ನು ಸರ್ಕಾರಿ ಬಂಗಲೆಗಳಿಂದ ಹೊರಹಾಕುವ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮ ನ್ಯಾಯಾಲಯದ ಮುಂದಿಲ್ಲ ಎಂದು ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com