ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ: ಪ್ರಧಾನಿ ಮೋದಿ ಜೊತೆ ಇತರ 15 ಯಜಮಾನರು ಆಚರಣೆಯಲ್ಲಿ ಭಾಗಿ

ನಾಳೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಸಮಾರಂಭದ ‘ಮುಖ್ಯ ಯಜಮಾನ’ (ಪೂಜೆಯನ್ನು ಆಯೋಜಿಸುವವರು) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪೂಜಾ ಕೈಂಕರ್ಯದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಆಯ್ಕೆಯಾದ 15 ಯಜಮಾನರು ಅಂದರೆ ಆತಿಥೇಯರು ಭಾಗಿಯಾಗಲಿದ್ದಾರೆ. 
ಅಯೋಧ್ಯೆ ರಾಮ ಮಂದಿರ
ಅಯೋಧ್ಯೆ ರಾಮ ಮಂದಿರ
Updated on

ಅಯೋಧ್ಯಾ: ನಾಳೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಸಮಾರಂಭದ ‘ಮುಖ್ಯ ಯಜಮಾನ’ (ಪೂಜೆಯನ್ನು ಆಯೋಜಿಸುವವರು) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪೂಜಾ ಕೈಂಕರ್ಯದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಆಯ್ಕೆಯಾದ 15 ಯಜಮಾನರು ಅಂದರೆ ಆತಿಥೇಯರು ಭಾಗಿಯಾಗಲಿದ್ದಾರೆ. 

ಪ್ರಧಾನಮಂತ್ರಿಯವರು 'ಮುಖ್ಯ ಯಜಮಾನ'ರಾಗಿ, 'ಪ್ರಾಣ-ಪ್ರತಿಷ್ಠಾಪನೆಗೆ ಕಾರಣವಾಗುವ ವಾರದ ಆಚರಣೆಗಳ ನಂತರ ಪ್ರಧಾನ ದೇವತೆಯ ಕಣ್ಣು ತೆರೆಯುವ 'ಚಕ್ಷು ಉನ್ಮಿಲನ್' ನ ಅಂತಿಮ ಆಚರಣೆಯನ್ನು ಮಾಡುವ ಸಾಧ್ಯತೆಯಿದೆ. 

ಪ್ರಧಾನಮಂತ್ರಿಯವರು ಈಗಾಗಲೇ 11 ದಿನಗಳ 'ಸಂಕಲ್ಪ' ತೆಗೆದುಕೊಳ್ಳುವ ಮೂಲಕ 'ಪ್ರಾಣ-ಪ್ರತಿಷ್ಠೆಯ ಆಚರಣೆಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಭಗವಾನ್ ರಾಮನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ದೇವಾಲಯಗಳ ರಾಷ್ಟ್ರವ್ಯಾಪಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಕಾಶಿಯ ದೊಮರಾಜ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಇತರ 15 ಮಂದಿ 'ಯಜಮಾನರು' ತಮ್ಮ ಪತ್ನಿಯರೊಂದಿಗೆ ಸಹ ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಕಾರ, ಉಡಿಯಾಪುರದ ಬನವಾಸಿ ಕಲ್ಯಾಣ ಆಶ್ರಮದ ಸಿಯರ್‌ಮನ್ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೆಮಿ, ಜೈಪುರದ ಗುರುಚರಣ್ ಸಿಂಗ್ ಗಿಲ್, ಯುಪಿಯ ಹರ್ದೋಯ್‌ನ ಕೃಷ್ಣ ಮೋಹನ್, ರಮೇಶ್ ಜೈನ್ ಮುಲ್ತಾನಿ, ಅಜ್ಲರಸನ್ ತಮಿಳುನಾಡು, ವಿಠಲ್ ರಾವ್ ಕಾಂಬಳೆ ಮುಂಬೈನ, ಘುಮಂತು (ಅಲೆಮಾರಿ) ಸಮಾಜದ ಮಹಾದೇವ ಗಾಯಕವಾಡ, ಕರ್ನಾಟಕದ ಕಲ್ಬುರ್ಗಿಯ ಶ್ರೀ ಲಿಂಗರಾಜ್ ವಾಸವರಾಜ್ ಅಪ್ಪ, ಲಕ್ನೋದ ದಿಲೀಪ್ ವಾಲ್ಮೀಕಿ, ಅನಿಲ್ ಚೌಧರಿ, ಕಾಶಿಯ ದೊಮರಾಜ, ಕೈಲಾಶ್ ಯಾದವ್, ಕವೀಂದ್ರ ಪ್ರತಾಪ್ ಸಿಂಗ್, ಕಾಶಿಯ ಕವೀಂದ್ರ ಪ್ರತಾಪ್ ಸಿಂಗ್ ಮತ್ತು ಪಲ್ವಾಲ್‌ನ ಅರುಣ್ ಚೌಧರಿ, ಹರ್ಯಾಣ ಅವರು ತಮ್ಮ ಪತ್ನಿಯರೊಂದಿಗೆ ಯಜಮಾನರಾಗಿ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿಯವರು ನಾಳೆ ಬೆಳಗ್ಗೆ 10.25ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ತಲುಪಿ 11 ಗಂಟೆಗೆ ರಾಮಜನ್ಮಭೂಮಿ ಆವರಣಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಸರಯುವಿನಲ್ಲಿ ಪವಿತ್ರ ಸ್ನಾನ: ಪ್ರಧಾನಮಂತ್ರಿಯವರು ಸರಯುನಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದ್ದು, ತುಳಸಿಘಾಟ್‌ನಲ್ಲಿ ವ್ಯವಸ್ಥೆಗಳು ನಡೆಯುತ್ತಿವೆ. 2021 ರ ಡಿಸೆಂಬರ್‌ನಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನ್ನು ಉದ್ಘಾಟಿಸಿದಾಗ ಪ್ರಧಾನಿ ವಾರಣಾಸಿ ಗಂಗೆಯಲ್ಲಿ ಸ್ನಾನ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com