ಭಾರತೀಯ ಉಪಗ್ರಹದಿಂದ ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ರಾಮ ಮಂದಿರದ ಮೊದಲ ಚಿತ್ರ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೈದರಾಬಾದ್ ಮೂಲದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ) ಬಾಹ್ಯಾಕಾಶದಿಂದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದ ಫೋಟೋವೊಂದನ್ನು ಒದಗಿಸಿದೆ. 
ರಾಮ ಮಂದಿರ
ರಾಮ ಮಂದಿರ

ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೈದರಾಬಾದ್ ಮೂಲದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ) ಬಾಹ್ಯಾಕಾಶದಿಂದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದ ಫೋಟೋವೊಂದನ್ನು ಒದಗಿಸಿದೆ. 

ಬಾಹ್ಯಾಕಾಶದ ಮೇಲೆ ತೂಗಾಡುತ್ತಿರುವ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ಸೆರೆಹಿಡಿಯಲಾದ ನೂತನ ರಾಮ ಮಂದಿರ ಫೋಟೋವನ್ನು ಇಸ್ರೋ ಭಾನುವಾರ ಹಂಚಿಕೊಂಡಿದೆ. 

ಕಳೆದ ವರ್ಷ ಡಿಸೆಂಬರ್ 16 ರಂದು  ದಶರಥ್ ಮಹಲ್, ಅಯೋಧ್ಯೆ ರೈಲು ನಿಲ್ದಾಣ ಮತ್ತು ಸರಯೂ ನದಿಯ ಫೋಟೋವನ್ನು ಸಹ ಸೆರೆ ಹಿಡಿಯಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರ ಸಮ್ಮುಖದಲ್ಲಿ ವೈದಿಕ ಸ್ತೋತ್ರಗಳ ನಡುವೆ ಸೋಮವಾರ ನೂತನ ರಾಮ ಮಂದಿರ ಉದ್ಘಾಟನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com