ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಸ್ಪೀಡ್ ಪೋಸ್ಟ್ ಮೂಲಕ ಉದ್ಧವ್ ಠಾಕ್ರೆಗೆ ಆಹ್ವಾನ!

ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಶಿವಸೇನೆ ಯುಬಿಟಿ ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಆಹ್ವಾನ ಕಳುಹಿಸಲಾಗಿದೆ. 
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಶಿವಸೇನೆ ಯುಬಿಟಿ ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಆಹ್ವಾನ ಕಳುಹಿಸಲಾಗಿದೆ. 

ಠಾಕ್ರೆ ಕುಟುಂಬವನ್ನು ನಡೆಸಿಕೊಂಡ ರೀತಿಯ ಬಗ್ಗೆ ಶಿವಸೇನಾ-ಯುಬಿಟಿ ಸಂಸದ ಸಂಜಯ್ ರಾವತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಕೊನೆ ಕ್ಷಣದಲ್ಲಿ ಆಹ್ವಾನ ನೀಡಲಾಗಿದೆ. ವೇಗವಾಗಿ ಆಹ್ವಾನ ತಲುಪಿಸುವ ನಿಟ್ಟಿನಲ್ಲಿ ಸ್ಪೀಡ್ ಪೋಸ್ಟ್ ಬಳಸಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಹೇಳಿದ್ದಾರೆ. 

ಆದಾಗ್ಯೂ, ಸ್ಪೀಡ್ ಪೋಸ್ಟ್ ಆಹ್ವಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾವತ್, "ನೀವು  ರಾಮನನ್ನು ಪೂಜಿಸಿ ಮತ್ತು ರಾವಣನಂತೆಆಳ್ವಿಕೆ ನಡೆಸುತ್ತೀರಿ. ರಾಮನು ನಿಮ್ಮನ್ನು ಶಪಿಸುತ್ತಾನೆ. ಎಲ್ಲಾ ಚಲನಚಿತ್ರ ತಾರೆಯರನ್ನು ಆಹ್ವಾನಿಸಲಾಗಿದೆ ಆದರೆ ಚಳುವಳಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಠಾಕ್ರೆ ಕುಟುಂಬವನ್ನು ಈ ರೀತಿ ನಡೆಸಲಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಧವ್ ಠಾಕ್ರೆ ಸೋಮವಾರದಿಂದ ಎರಡು ದಿನಗಳ ನಾಸಿಕ್ ಗೆ ಭೇಟಿ ನೀಡಲಿದ್ದು, ಅಲ್ಲಿನ ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದು, ಗೋದಾವರಿ ನದಿ ದಡದಲ್ಲಿ 'ಮಹಾ ಆರತಿ' ಮಾಡಲಿದ್ದಾರೆ. ಮಂಗಳವಾರ, ಅವರು ನಾಸಿಕ್‌ನಲ್ಲಿ ತಮ್ಮ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ಸೋಮವಾರ ಬಹು ನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ನೆರವೇರಲಿದೆ. ಈ ಸಮಾರಂಭಕ್ಕೆ 8,000ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ರಾಮ ಜನ್ಮಭೂಮಿಯಲ್ಲಿ ಮಂದಿರಕ್ಕಾಗಿ ನಡೆದ ಹೋರಾಡಿದ ಕುಟುಂಬದ ಸದಸ್ಯರು ಸಹ ಸೇರಿದ್ದಾರೆ. ಬಹುತೇಕ ಎಲ್ಲಾ ವಿರೋಧ ಪಕ್ಷದ ನಾಯಕರು ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ.ಕಾಂಗ್ರೆಸ್ ಇದನ್ನು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕ್ರಮ ಎಂದು ಕರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com