ರಾಮ ಮಂದಿರ ಉದ್ಘಾಟನೆ: ಅತಿಥಿ, ಗಣ್ಯರಿಗೆ, ಅಯೋಧ್ಯೆ ಕುರಿತ ಪುಸ್ತಕ, ಲೋಹದ ಹಣತೆ ಉಡುಗೊರೆ

ಅಯೋಧ್ಯೆಯ ರಾಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು, ಅತಿಥಿಗಳಿಗೆ ಹಲವು ಉಡುಗೊರೆಗಳನ್ನು ನೀಡಲಾಗಿದೆ. 
ಲೋಹದ ಹಣತೆ ಉಡುಗೊರೆ
ಲೋಹದ ಹಣತೆ ಉಡುಗೊರೆ

ಅಯೋಧ್ಯೆ: ಅಯೋಧ್ಯೆಯ ರಾಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು, ಅತಿಥಿಗಳಿಗೆ ಹಲವು ಉಡುಗೊರೆಗಳನ್ನು ನೀಡಲಾಗಿದೆ. ಈ ಪೈಕಿ ಲೋಹದ ಹಣತೆ, ಅಯೋಧ್ಯೆಯ ಕುರಿತಾದ ಪುಸ್ತಕ, ವಿಶೇಷ ಮಾಲೆ, ಭಗವಾನ್ ರಾಮನ ಹೆಸರು ಇರುವ ಸ್ಕಾರ್ಫ್ ಗಳು ಪ್ರಮುಖವಾದದ್ದಾಗಿದೆ. 

ಮಂದಿರ ಹಾಗೂ ಭಗವಾನ್ ರಾಮಲಲ್ಲಾನ ಗ್ರಾಫಿಕ್ ಚಿತ್ರವಿರುವ ಬ್ಯಾಗ್ ನಲ್ಲಿ ಉಡುಗೊರೆಗಳನ್ನಿಟ್ಟು ಕೊಡಲಾಗಿದೆ. ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಇಂದು ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ನೆರವೇರಿತು. 

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ 7,000 ಮಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿತ್ತು. ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂದಿರಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. 

ಉಡುಗೊರೆ ನೀಡಲಾದ ಅಯೋಧ್ಯ ಧಾಮ- ಭಗವಂತನ ಸನ್ನಿಧಿ ಎಂಬ ಶೀರ್ಶಿಕೆ ಇರುವ ಪುಸ್ತಕದಲ್ಲಿ ಭಗವಾನ್ ರಾಮಲಲ್ಲಾನ ಹಳೆಯ ವಿಗ್ರಹದ ಫೋಟೋವನ್ನು ಒಳಗೊಂಡಿದೆ. ತುಳಸಿ ಮಾಲೆಯಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಎಂಬ ಟ್ಯಾಗ್ ಲೈನ್ ಇದೆ. ಅತಿಥಿಗಳಿಗೆ ಲಡ್ಡು, ಗೋಡಂಬಿ ಹಾಗೂ ಇನ್ನಿತರ ಪ್ರಸಾದ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com