ಅಯೋಧ್ಯೆ: ಇಂದು ಪೂಜೆ ಸಲ್ಲಿಸಲು ಪ್ರಧಾನಿ ಮೋದಿಗೆ ದೇವರು ಕೊಟ್ಟ ಅವಕಾಶ- ಎಚ್‌ಡಿ ದೇವೇಗೌಡ

ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪೂಜೆ ನೆರವೇರಿಸುತ್ತಿರುವುದು ದೇವರು ಕೊಟ್ಟ ಅವಕಾಶ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. 
ಹೆಚ್. ಡಿ.ದೇವೇಗೌಡ
ಹೆಚ್. ಡಿ.ದೇವೇಗೌಡ

ಅಯೋಧ್ಯೆ: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪೂಜೆ ನೆರವೇರಿಸುತ್ತಿರುವುದು ದೇವರು ಕೊಟ್ಟ ಅವಕಾಶ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. 

ರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಅರ್ಪಿಸಿದ ಮಾಜಿ ಪ್ರಧಾನಿ, ಇಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.

ರಾಮನಲ್ಲಿ ನಮಗೆ ದೃಢವಾದ ನಂಬಿಕೆ ಇದೆ. ರಾಮ ಲಲ್ಲಾನ ಪವಿತ್ರ ಪೂಜೆ ಮಾಡಲು ಹೊರಟಿರುವ  ಪ್ರಧಾನಿ ಮೋದಿಯವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪ್ರಧಾನಿ ಮೋದಿ ಅಮೂಲ್ಯವಾದ ವ್ಯಕ್ತಿ. ಇದು ದೇವರು ನೀಡಿದ ಅವಕಾಶಗಳಲ್ಲಿ ಒಂದಾಗಿದೆ. ಅದು ಎಲ್ಲರಿಗೂ ಬರುವುದಿಲ್ಲ, ಅವರು ವಿಷ್ಣು ಮತ್ತು ಶಿವನ ಆಶೀರ್ವಾದವನ್ನು ಪಡೆದಿದ್ದಾರೆ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದರು. 

ಪ್ರಧಾನಿ ಮೋದಿ ಪೂಜೆ ನೆರವೇರಿಸುತ್ತಿರುವುದು ಅತೀವ ಸಂತಸವಾಗಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ವಿಪಕ್ಷಗಳ ಒಕ್ಕೂಟದ ನಾಯಕರು ಭಾಗವಹಿಸದಿರುವುದು ಸರಿಯಾದ ನಿರ್ಧಾರವಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com