ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ, ಇಂದಿನ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಂಪೂರ್ಣ ಮಾಹಿತಿ

ಉತ್ತರ ಪ್ರದೇಶದ ದೇವಾಲಯಗಳ ಪಟ್ಟಣ ಅಯೋಧ್ಯೆಯಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇಂದು ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಈ ಸಮಾರಂಭದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಮ ಮಂದಿರ
ರಾಮ ಮಂದಿರ

ಅಯೋಧ್ಯೆ: ಉತ್ತರ ಪ್ರದೇಶದ ದೇವಾಲಯಗಳ ಪಟ್ಟಣ ಅಯೋಧ್ಯೆಯಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇಂದು ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಈ ಸಮಾರಂಭದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಂಗೀತ ಕಾರ್ಯಕ್ರಮ: ಬೆಳಗ್ಗೆ 10 ಗಂಟೆಗೆ ಆಕಾಶ ರಾಗವಾದ ಮಂಗಳ ಧ್ವನಿಯ ಭವ್ಯ ಸಂಗೀತದೊಂದಿಗೆ ಸಮಾರಂಭ ಪ್ರಾರಂಭವಾಗಲಿದೆ. ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಆಕರ್ಷಕ ಸಂಗೀತ ವಾದ್ಯಗಳು ಈ ಶುಭ ಸಮಾರಂಭಕ್ಕೆ ಮೆರುಗು ನೀಡಲಿದ್ದು, ಸುಮಾರು 2 ಗಂಟೆಗಳ ಕಾಲ ಸಂಗೀತದ ಕಲರವ ಮೇಳೈಸಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತಿಥಿಗಳು ಬೆಳಗ್ಗೆ 10-30 ರೊಳಗೆ ಪ್ರವೇಶಿಸಲು ಕೋರಲಾಗಿದೆ.

ಅತಿಥಿಗಳ ಪ್ರವೇಶ ಮತ್ತು ಪ್ರೋಟೋಕಾಲ್ ಗಳು: ಸಮಾರಂಭಕ್ಕೆ ಆಗಮಿಸಿರುವ ಅತಿಥಿಗಳು ಬೆಳಗ್ಗೆ 10-30ಕ್ಕೆ ರಾಮಜನ್ಮಭೂಮಿ ಸಂಕೀರ್ಣಕ್ಕೆ ಪ್ರವೇಶವನ್ನು ನಿಗದಿಪಡಿಸಲಾಗಿದೆ. ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದ್ದು, ಟ್ರಸ್ಟ್ ನೀಡುವ ಪ್ರವೇಶ ಪತ್ರಗಳ ಮೂಲಕ ಮಾತ್ರ ಅನುಮತಿಸಲಾಗುತ್ತಿದೆ. ವಿಶೇಷವೆಂದರೆ ಪ್ರವೇಶ ಪ್ರಕ್ರಿಯೆಗೆ ಪ್ರವೇಶ ಪತ್ರದಲ್ಲಿ ಕ್ಯೂ ಆರ್ ಕೋಡ್ ಹೊಂದಿಸುವ ಅಗತ್ಯವಿದೆ. ಇದು ಸುರಕ್ಷಿತ ಮತ್ತು ಸಂಘಟಿತ ಸಭೆಯನ್ನು ಖಚಿತಪಡಿಸುತ್ತದೆ. ಟ್ರಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವಿವರವಾದ ಪ್ರವೇಶ ಮಾರ್ಗಸೂಚಿಗಳನ್ನು ಹಂಚಿಕೊಂಡಿದ್ದು, ತಡೆ ರಹಿತ ಮತ್ತು ನಿಯಂತ್ರಿತ ಪ್ರವೇಶ ಕಾರ್ಯ ವಿಧಾನಕ್ಕೆ ಒತ್ತು ನೀಡಿದೆ.

ಪ್ರಾಣ ಪ್ರತಿಷ್ಠಾಪನೆಯ ಸಮಯ ಮತ್ತು ಆಚರಣೆಗಳು:  ಇಂದು ಮಧ್ಯಾಹ್ನ 12-20ಕ್ಕೆ ರಾಮ ಪ್ರಾಣ ಪ್ರತಿಷ್ಠಾಪನೆಯ ಕಾರ್ಯ ಪ್ರಾರಂಭವಾಗಲಿದೆ. ಶುಭ ಅಭಿಜಿತ್ ಮುಹೂರ್ತದಲ್ಲಿ ಮುಖ್ಯ ಪೂಜೆಯನ್ನು ನಡೆಸಲಾಗುವುದು ಮಧ್ಯಾಹ್ನ 12-29 ರಿಂದ 12-30ರವರೆಗೆ 32 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. 150ಕ್ಕೂ ಹೆಚ್ಚು ಸಂಪ್ರದಾಯಗಳಂತೆ ಪೂಜೆ ನೆರವೇರಲಿದ್ದು, 7 ಸಾವಿರಕ್ಕೂ ಅಧಿಕ ವಿಶೇಷ ಆಹ್ವಾನಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಯಜಮಾನರಾಗಿ ಪ್ರಧಾನಿ ಮೋದಿ ಭಾಗಿ: ಕಾಶಿಯ ಪ್ರಸಿದ್ಧ ವೈದಿಕ ಆಚಾರ್ಯ ಗಣೇಶ್ ದ್ರಾವಿಡ್, ಆಚಾರ್ಯ ಲಕ್ಷ್ಮಿಕಾಂತ ದೀಕ್ಷಿತ್ ಅವರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರು ಧಾರ್ಮಿಕ ಕಾರ್ಯ ನೆರವೇರಿಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಯಮ ಕೇವಲ 32 ಸೆಕೆಂಡ್ ಗಳು, ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಖ್ಯ ಯಜಮಾನರಾಗಿ ಭಾಗಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com