ಅಯೋಧ್ಯೆಯಲ್ಲಿ ನೋಡಿದ್ದು, ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ: ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ನಿನ್ನೆ ನಡೆದ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆಯಲ್ಲಿ ನಿನ್ನೆ ನಡೆದ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಮಾರಂಭದ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ, ಸೋಮವಾರದ ಸಮಾರಂಭ ನಮ್ಮ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ. 

ಮೂರು ನಿಮಿಷಗಳ ವೀಡಿಯೊದಲ್ಲಿ, ಮಡಚಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿ ಛತ್ರಿ ಹಿಡಿದುಕೊಂಡು ಪ್ರಧಾನಿ ದೇವಾಲಯದ ಗರ್ಭಗುಡಿಗೆ ಕಾಲಿಡುತ್ತಿರುವುದನ್ನು ಕಾಣಬಹುದು. ನೂತನವಾಗಿ ನಿರ್ಮಿಸಲಾದ ದೇವಾಲಯದಲ್ಲಿ ಪ್ರಧಾನಿ ಮೋದಿಯವರು ಪವಿತ್ರ ಸಮಾರಂಭದಲ್ಲಿ ಪಾಲ್ಗೊಂಡು ಹೊಸ ರಾಮ್ ಲಲ್ಲಾ ವಿಗ್ರಹದಿಂದ ಆಶೀರ್ವಾದ ತೆಗೆದುಕೊಳ್ಳುವುದು ವಿಡಿಯೋದಲ್ಲಿದೆ. 

ಜನವರಿ 22 "ಕ್ಯಾಲೆಂಡರ್‌ನಲ್ಲಿ ದಿನಾಂಕವಲ್ಲ, ಆದರೆ ಹೊಸ ಯುಗದ ಉದಯ. ಸಾವಿರಾರು ವರ್ಷಗಳ ನಂತರವೂ ಜನರು ಈ ದಿನಾಂಕ, ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ನಾವು ಇದನ್ನು ವೀಕ್ಷಿಸುತ್ತಿರುವುದು ರಾಮನ ಪರಮ ಆಶೀರ್ವಾದವಾಗಿದೆ. ಇವು ಶಾಶ್ವತವಾದ ನೆನಪುಗಳು ಎಂದು ಸೋಮವಾರ ಪ್ರಧಾನಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com