ಇಳಯರಾಜ ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ ಶ್ರೀಲಂಕಾದಲ್ಲಿ ನಿಧನ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರಿ, ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ ಅವರು 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಭವತಾರಿಣಿ
ಭವತಾರಿಣಿ

ಚೆನ್ನೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರಿ, ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ ಅವರು 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭವತಾರಿಣಿ ಅವರು ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಜನವರಿ 26 ರಂದು ಚೆನ್ನೈಗೆ ತರಲಾಗುತ್ತಿದೆ. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.

2000 ರಲ್ಲಿ 'ಭಾರತಿ' ಚಿತ್ರದ 'ಮಾಯಿಲ್ ಪೋಲ ಪೊನ್ನು ಒನ್ನು' ತಮಿಳು ಹಾಡಿಗಾಗಿ ಅತ್ಯುತ್ತಮ ಹಿನ್ನಲೆ ಗಾಯಕಿ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ರಾಸಯ್ಯ ಚಿತ್ರದ ಮೂಲಕ ಗಾಯಕಿಯಾಗಿ ಪಾದಾರ್ಪಣೆ ಮಾಡಿದ ಭವತಾರಿಣಿ ಅವರು 2002 ರಲ್ಲಿ ಬಿಡುಗಡೆಯಾದ ಖ್ಯಾತ ನಟಿ ರೇವತಿ ನಿರ್ದೇಶನದ ಮಿತ್ರ, ಮೈ ಫ್ರೆಂಡ್ ಚಿತ್ರಗಳಿಗೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ನಂತರ ಅವರು 'ಫಿರ್ ಮಿಲೇಂಗೆ' ಮತ್ತು ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.

ಭವತಾರಿಣಿ ಅವರ ಕೊನೆಯ ಮ್ಯೂಸಿಕ್ ಆಲ್ಬಂ ಮಲಯಾಳಂ ಚಿತ್ರ 'ಮಾಯಾನದಿ' ಆಗಿತ್ತು. ಅವರು ತಮಿಳು ಚಲನಚಿತ್ರಗಳಾದ 'ಕಾದಲುಕ್ಕು ಮರಿಯದೈ', 'ಭಾರತಿ', 'ಅಳಗಿ', 'ಫ್ರೆಂಡ್ಸ್', 'ಪಾ', 'ಮಂಕಥಾ' ಮತ್ತು 'ಅನೇಗನ್' ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com