ಅಯೋಧ್ಯೆಗೆ ಲಕ್ಷೋಪಲಕ್ಷ ಭಕ್ತರ ಆಗಮನ: ವಾರ್ಷಿಕ 4 ಲಕ್ಷ ಕೋಟಿ ಆದಾಯ ಸಂಗ್ರಹ ನಿರೀಕ್ಷೆ

ಪವಿತ್ರಾಭಿಷೇಕದ ಒಂದು ದಿನದ ನಂತರ, ಅಯೋಧ್ಯೆಯಲ್ಲಿ ದೇವರ ದರ್ಶನ ಪಡೆಯಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರಿಂದ ರಾಮ ಲಲ್ಲಾಗೆ 3 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಭಕ್ತರಿಂದ ಹರಿದುಬಂದಿದೆ. ಇದೇ ರೀತಿ ಮುಂದುವರಿದರೆ ಉತ್ತರ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸೂಚನೆಯಿದೆ. 
ರಾಮ ಮಂದಿರ ಹೊರಗೆ ಭದ್ರತಾ ಸಿಬ್ಬಂದಿ
ರಾಮ ಮಂದಿರ ಹೊರಗೆ ಭದ್ರತಾ ಸಿಬ್ಬಂದಿ

ಲಖನೌ: ಪವಿತ್ರಾಭಿಷೇಕದ ಒಂದು ದಿನದ ನಂತರ, ಅಯೋಧ್ಯೆಯಲ್ಲಿ ದೇವರ ದರ್ಶನ ಪಡೆಯಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರಿಂದ ರಾಮ ಲಲ್ಲಾಗೆ 3 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಭಕ್ತರಿಂದ ಹರಿದುಬಂದಿದೆ. ಇದೇ ರೀತಿ ಮುಂದುವರಿದರೆ ಉತ್ತರ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸೂಚನೆಯಿದೆ. 

ಎಸ್‌ಬಿಐ ರಿಸರ್ಚ್‌ನ ಇತ್ತೀಚಿನ ಪತ್ರಿಕೆಯು ರಾಮ ಮಂದಿರ ಮತ್ತು ಅಯೋಧ್ಯೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಅದನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಕೈಗೊಂಡಿರುವ ಉಪಕ್ರಮಗಳಿಂದಾಗಿ ಉತ್ತರ ಪ್ರದೇಶ ರಾಜ್ಯವು 5,000 ಕೋಟಿ ರೂಪಾಯಿಗಳಷ್ಟು ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹ ಕಾಣಬಹುದು ಎಂದು ಹೇಳಿದೆ.

1 ಟ್ರಿಲಿಯನ್ ಆರ್ಥಿಕತೆಯ ಗುರಿಯ ಹತ್ತಿರ ರಾಜ್ಯವನ್ನು ಕೊಂಡೊಯ್ಯುವ ನಿರೀಕ್ಷೆಯಿದ್ದು ಅಯೋಧ್ಯೆಯು ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಬೆಳವಣಿಗೆಯೊಂದಿಗೆ, ಉತ್ತರ ಪ್ರದೇಶ ಈ ವರ್ಷ ಸುಮಾರು 4 ಲಕ್ಷ ಕೋಟಿಗಳಷ್ಟು ಆದಾಯ ಸಂಗ್ರಹಣೆ ಮಾಡಿ ಶ್ರೀಮಂತ ರಾಜ್ಯ ಎನಿಸಬಹುದು.  

ವಿದೇಶಿ ಷೇರು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜೆಫರೀಸ್ ಪ್ರಕಾರ, ಪ್ರವಾಸಿಗರ ಸಂಖ್ಯೆಯಲ್ಲಿ ಅಯೋಧ್ಯೆ ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾವನ್ನು ಮೀರಿಸುವ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆ ನಂತರ ಬೃಹತ್ ಜನಸಮೂಹ ಸೇರಿದ್ದು ಐದು ಲಕ್ಷಕ್ಕೂ ಹೆಚ್ಚು ಭಕ್ತರು ತಮ್ಮ ಸರದಿಗಾಗಿ ಕಾಯುತ್ತಾ ಸಮಾನ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. 

ಅಯೋಧ್ಯೆಯು ವಾರ್ಷಿಕವಾಗಿ ಸುಮಾರು ಐದು ಕೋಟಿ ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ, ಇದು ಉತ್ತರ ಪ್ರದೇಶದೊಳಗೆ ಮಾತ್ರವಲ್ಲದೆ ಭಾರತದ ಪ್ರಮುಖ ಪ್ರವಾಸೋದ್ಯಮ ತಾಣವಾಗಿದೆ.

ವಾಸ್ತವವಾಗಿ, ಆಂಧ್ರಪ್ರದೇಶದ ಅತ್ಯಂತ ಸಮೃದ್ಧವಾದ ದೇವಾಲಯವಾದ ತಿರುಪತಿ ಬಾಲಾಜಿ ವಾರ್ಷಿಕವಾಗಿ 2.5 ಕೋಟಿ ಭಕ್ತರನ್ನು ಆಕರ್ಷಿಸುತ್ತದೆ. ವಾರ್ಷಿಕ 1,200 ಕೋಟಿ ಆದಾಯವನ್ನು ಗಳಿಸುತ್ತದೆ. ಅದೇ ರೀತಿ, ವೈಷ್ಣೋ ದೇವಿ ದೇಗುಲಕ್ಕೆ ಪ್ರತಿ ವರ್ಷ ಸುಮಾರು 80 ಲಕ್ಷ ಪ್ರವಾಸಿಗರು ಬರುತ್ತಾರೆ. ವಾರ್ಷಿಕ 500 ಕೋಟಿ ಆದಾಯವನ್ನು ಗಳಿಸುತ್ತಾರೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಜ್ ಮಹಲ್ ವಾರ್ಷಿಕವಾಗಿ 1,000 ಕೋಟಿ ಆದಾಯದೊಂದಿಗೆ ಸುಮಾರು 70 ಲಕ್ಷ ಪ್ರವಾಸಿಗರನ್ನು ಪಡೆಯುತ್ತದೆ. ಸರ್ಕಾರಿ ಅಧಿಕಾರಿಯ ಪ್ರಕಾರ, ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಸಂಖ್ಯೆ ದಿನಕ್ಕೆ ಮೂರು ಲಕ್ಷಕ್ಕೆ ಏರಬಹುದು. ಪ್ರತಿಯೊಬ್ಬರು ಭೇಟಿಯ ಸಮಯದಲ್ಲಿ ಸುಮಾರು 2,500 ರೂಪಾಯಿಗಳನ್ನು ಖರ್ಚು ಮಾಡಿದರೆ, ಅಯೋಧ್ಯೆಯ ಆರ್ಥಿಕತೆಯು 25,000 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com