ಅಯೋಧ್ಯೆಯಲ್ಲಿ ರಾಮ ರಾಗ ಸೇವೆ: ಹೇಮಾ ಮಾಲಿನಿ, ಅನುಪ್ ಜಲೋಟಾ ಸೇರಿ 100 ಕಲಾವಿದರು ಭಾಗಿ

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಆಯೋಜಿಸಲಾದ "ಶ್ರೀ ರಾಮ್ ರಾಗ್ ಸೇವೆ"ಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನುಪ್ ಜಲೋಟಾ, ಅನುರಾಧಾ ಪೌಡ್ವಾಲ್ ಮತ್ತು ಸೋನಾಲ್...
ಹೇಮಾ ಮಾಲಿನಿ
ಹೇಮಾ ಮಾಲಿನಿ

ಅಯೋಧ್ಯೆ: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಆಯೋಜಿಸಲಾದ "ಶ್ರೀ ರಾಮ್ ರಾಗ್ ಸೇವೆ"ಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನುಪ್ ಜಲೋಟಾ, ಅನುರಾಧಾ ಪೌಡ್ವಾಲ್ ಮತ್ತು ಸೋನಾಲ್ ಮಾನ್ಸಿಂಗ್ ಸೇರಿದಂತೆ 100 ಕಲಾವಿದರು ಭಾಗವಹಿಸಲಿದ್ದಾರೆ.

ಭಗವಾನ್ ರಾಮನಿಗಾಗಿ ಇಂದಿನಿಂದ ಪ್ರಾರಂಭವಾಗುವ 45 ದಿನಗಳ ಭಕ್ತಿ ಸಂಗೀತ ಉತ್ಸವವು ಮಾರ್ಚ್ 10 ರಂದು ಮುಕ್ತಾಯಗೊಳ್ಳಲಿದೆ.

ಇದನ್ನು ಓದಿ: 

ಜನವರಿ 26 ರಿಂದ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಶಾಸ್ತ್ರೀಯ ಸಂಪ್ರದಾಯದಂತೆ ರಾಗ ಸೇವೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಗುಡಿ ಮಂಟಪದಲ್ಲಿ ದೇವರ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ಪ್ರಾಂತ್ಯಗಳ 100ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಾರೆ. ದೇಶದಾದ್ಯಂತದ ವಿವಿಧ ಕಲಾ ಸಂಪ್ರದಾಯಗಳು ಮುಂದಿನ 45 ದಿನಗಳ ಕಾಲ ಭಗವಾನ್ ರಾಮನಿಗಾಗಿ 'ರಾಗ ಸೇವೆ'ಯನ್ನು ನೀಡಲಿವೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರೊಬ್ಬರು ತಿಳಿಸಿದ್ದಾರೆ.

'ಗುಡಿ ಮಂಟಪ'ವು 'ಗರ್ಭ ಗುಡಿ' ಮುಂಭಾಗದಲ್ಲಿದೆ. ಗರ್ಭ ಗುಂಡಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಲಲ್ಲಾನ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ವೈಜಯಂತಿ ಮಾಲಾ, ಸಿಕ್ಕಿಲ್ ಗುರ್ಚರಣ್, ಪಂಡಿತ್ ಸಜನ್ ಮಿಶ್ರಾ, ಜಸ್ಬೀರ್ ಜಸ್ಸಿ, ಅರುಣಾ ಸಾಯಿರಾಂ, ಸ್ವಪ್ನ ಸುಂದರಿ, ರಾಹುಲ್ ದೇಶಪಾಂಡೆ, ಸುರೇಶ್ ವಾಡ್ಕರ್, ದರ್ಶನಾ ಝವೇರಿ, ಉದಯ್ ಭವಾಲ್ಕರ್, ಜಯಂತ್ ಕುಮಾರೇಶ್, ಪೂರ್ಣ ದಾಸ್ ಬೌಲ್, ಗಾಯತ್ರಿ ಮತ್ತು ದೇವಕಿ ಪಂಡಿತ್ 'ರಾಗ ಸೇವೆ' ಪ್ರದರ್ಶಿಸುವ ಕಲಾವಿದರಲ್ಲಿ ಪ್ರಮುಖರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com