ಆರ್‌ಜೆಡಿ ಜೊತೆ ಕೆಲಸ ಮಾಡುವುದು ಕಷ್ಟಕರವಾಗಿತ್ತು, ಹೀಗಾಗಿ ಮೈತ್ರಿಯಿಂದ ಹೊರಬಂದೆ: ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್

ಇಂದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ಹೇಳಿದ್ದೇನೆ. ಮಹಾಘಟಬಂಧನ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲದ ಕಾರಣ ಈ ಪರಿಸ್ಥಿತಿ ಬಂದಿದೆ. ಎಲ್ಲರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ ಇದು ಮಹಾಘಟಬಂಧನ ಮೈತ್ರಿಯಿಂದ ಹೊರಬಂದು ಮುಖ್ಯಮಂತ್ರಿ ಸ್ಥಾನಕ್ಕೆ
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಇಂದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ಹೇಳಿದ್ದೇನೆ. ಮಹಾಘಟಬಂಧನ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲದ ಕಾರಣ ಈ ಪರಿಸ್ಥಿತಿ ಬಂದಿದೆ. ಎಲ್ಲರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ ಇದು ಮಹಾಘಟಬಂಧನ ಮೈತ್ರಿಯಿಂದ ಹೊರಬಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್ ಅವರು ಹೇಳಿದ ಮಾತುಗಳು.

ನಿತೀಶ್ ಕುಮಾರ್ ಅವರು ಇಂದು ಬೆಳಗ್ಗೆ ಜೆಡಿಯು ಶಾಸಕರ ಸಭೆ ನಡೆಸಿ ನಂತರ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವರದಿಗಳ ಪ್ರಕಾರ, ನಿತೀಶ್ ಕುಮಾರ್ ಅವರು ಇಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಇಂದು ಸಂಜೆ 9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಹಾಮೈತ್ರಿಕೂಟದಲ್ಲಿ ನನಗೆ ಅನನುಕೂಲವಾಗಿದೆ. ಮೈತ್ರಿಕೂಟದಲ್ಲಿ ಆರ್‌ಜೆಡಿ ಜೊತೆ ಕೆಲಸ ಮಾಡುವುದು ಕಷ್ಟಕರವಾಗಿತ್ತು. ಸೀಟು ಹಂಚಿಕೆಯ ಮಾತುಕತೆಯಲ್ಲಿಯೂ ಇಂಡಿಯಾ ಮೈತ್ರಿಕೂಟ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಹಿಂದಿನ ಮೈತ್ರಿಯನ್ನು ತೊರೆದು ಎನ್ ಡಿಎ ಜೊತೆ ಹೊಸ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದರು.
 

ಗಮನಾರ್ಹವೆಂದರೆ, ಕಾಂಗ್ರೆಸ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಅತಿದೊಡ್ಡ ಮೈತ್ರಿ ಪಾಲುದಾರ ಪಕ್ಷವಾಗಿತ್ತು. ನಿತೀಶ್ ಕುಮಾರ್ ನಾಯಕತ್ವದಲ್ಲಿ ಜೆಡಿಯು ಹೊರಬಂದರೆ ಮೈತ್ರಿಕೂಟಕ್ಕೆ ವಿಧಾನಸಭೆಯಲ್ಲಿ ಬಹುಮತಕ್ಕೆ ಎಂಟು ಸದಸ್ಯರ ಕೊರತೆಯಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ, ಆರ್‌ಜೆಡಿ 79 ಶಾಸಕರನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಬಿಜೆಪಿ 78, ಜೆಡಿ (ಯು) 45, ಕಾಂಗ್ರೆಸ್ 19, ಸಿಪಿಐ (ಎಂ-ಎಲ್) 12, ಸಿಪಿಐ (ಎಂ) ಮತ್ತು ಸಿಪಿಐ ತಲಾ ಎರಡು ಹಾಗೂ ನಾಲ್ಕು ಸ್ಥಾನಗಳನ್ನು ಹೊಂದಿದೆ. ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ), ಎಐಎಂಐಎಂಗೆ ಒಬ್ಬರು ಮತ್ತು ಒಬ್ಬ ಸ್ವತಂತ್ರ ಶಾಸಕರಿದ್ದಾರೆ. 

ನಿತೀಶ್ ಕುಮಾರ್ ಅವರು ಈ ಕ್ರಮ ಕೈಗೊಂಡರೆ, ನಾಲ್ಕನೇ ಬಾರಿ ಪಕ್ಷ ಬದಲಾಯಿಸಿದಂತಾಗುತ್ತದೆ. ಹಿಂದೆ 1990 ರಿಂದ ಎನ್ ಡಿಎ ಮೈತ್ರಿಕೂಟದ ಭಾಗವಾಗಿದ್ದ ಅವರು ಜೆಡಿಯುವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಆಗಸ್ಟ್ 2022 ರಲ್ಲಿ ಮೈತ್ರಿಯಿಂದ ಹೊರಬಂದಿದ್ದರು. 2000 ನ್ ಇಸವಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ 'ಜಂಗಲ್ ರಾಜ್' ವಿರುದ್ಧ ಪ್ರಚಾರ ಮಾಡಿದ ನಂತರ ನಿತೀಶ್ ಕುಮಾರ್ ಅವರು ಮೊದಲ ಬಾರಿಗೆ ಬಿಹಾರ ಸಿಎಂ ಆದರು. ನಂತರ ಎಂಟು ಬಾರಿ ಬಿಹಾರದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

2013 ರಲ್ಲಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವಲ್ಲಿ ಭಿನ್ನಾಭಿಪ್ರಾಯಗಳ ಕಾರಣ 17 ವರ್ಷಗಳ ಮೈತ್ರಿ ನಂತರ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟ ತೊರೆದಿದ್ದರು. 2015 ರಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾ ಮೈತ್ರಿ ಮಾಡಿಕೊಂಡ ನಂತರ ಮುಖ್ಯಮಂತ್ರಿಯಾಗಿ ಮರಳಿದರು. 2017 ರಲ್ಲಿ ಆರ್‌ಜೆಡಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖಿಸಿ ಅದರಿಂದ ಹೊರನಡೆದರು. ನಂತರ ಮತ್ತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎನ್ ಡಿಎ ಭಾಗವಾದರು. 2022 ರಲ್ಲಿ ಮತ್ತೊಮ್ಮೆ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com