ಆಡಳಿತರೂಢ YSR ಕಾಂಗ್ರೆಸ್‌ಗೆ ಭಾರೀ ಹಿನ್ನಡೆ: ಶಾಸಕ ಕೋನೇಟಿ ಆದಿಮುಲಂ ರಾಜೀನಾಮೆ

ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದ್ದು, ಸತ್ಯವೇಡು ಶಾಸಕ ಕೋನೇಟಿ ಆದಿಮೂಲಂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕೋನೇಟಿ ಆದಿಮೂಲಂ
ಕೋನೇಟಿ ಆದಿಮೂಲಂ

ತಿರುಪತಿ: ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದ್ದು, ಸತ್ಯವೇಡು ಶಾಸಕ ಕೋನೇಟಿ ಆದಿಮೂಲಂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ತಿರುಪತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತ್ತು. ಈ ಬಗ್ಗೆ  ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಪಕ್ಷದ ಶಾಸಕ ಕೋನೇಟಿ ಆದಿಮೂಲಂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಹಾಲಿ ಸಂಸದ ಡಾ.ಎಂ ಗುರುಮೂರ್ತಿ ಬದಲಿಗೆ ಈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶಾಸಕ ಆದಿಮೂಲಂ ಅವರಿಗೆ ಸೂಚಿಸಲಾಗಿತ್ತು. ಇನ್ನು ಗುರುಮೂರ್ತಿ ಅವರನ್ನು ಇತ್ತೀಚೆಗೆ ಸತ್ಯವೇಡು ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಲಾಗಿತ್ತು.

ಇಂದು ಸುದ್ದಿಗೋಷ್ಠಿ ನಡೆಸಿದ್ದ ಆದಿಮೂಲಂ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯನ್ನು ವೈಎಸ್‌ಆರ್‌ಸಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಇನ್ನು ಸತ್ಯವೇಡಲ್ಲಿ ಚುನಾವಣೆಗೆ ಸ್ಪರ್ಧಿಸಲು ಆದಿಮೂಲಂ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀ ಸಿಟಿ ಕೈಗಾರಿಕಾ ವಲಯವನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದಿರುವ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳಲು ಪಕ್ಷವು 'ಸುರಕ್ಷಿತ ಅಭ್ಯರ್ಥಿ'ಯನ್ನು ಹುಡುಕುತ್ತಿದೆ ಎಂದು YSRCP ಮೂಲಗಳು ಸೂಚಿಸುತ್ತವೆ.

14 ವರ್ಷಗಳಿಂದ ಸತ್ಯವೇಡು ಕ್ಷೇತ್ರದಲ್ಲಿ ವೈಎಸ್‌ಆರ್‌ಸಿಪಿಯನ್ನು ದಣಿವರಿಯಿಲ್ಲದೆ ಬೆಂಬಲಿಸಿದ್ದೇನೆ. 2019ರಲ್ಲಿ ಹಗಲಿರುಳು ಶ್ರಮಿಸಿ ಟಿಕೆಟ್ ಮತ್ತು ಚುನಾವಣೆ ಗೆದ್ದಿದ್ದೇನೆ. ಯಾವುದೇ ತಪ್ಪು ಮಾಡದೆ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ' ಎಂದು ಆದಿಮೂಲ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com