
ನವದೆಹಲಿ: ಕೇಂದ್ರ ಚುನಾವಣಾ ಆಯೋಗ(ಇಸಿಐ) ಸೋಮವಾರ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದ್ದು, ಫೆಬ್ರವರಿ 27 ರಂದು ಮತದಾನ ನಡೆಯಲಿದೆ.
ಎಪ್ರಿಲ್ 2024 ರಲ್ಲಿ ನಿವೃತ್ತಿಯಾಗಲಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ರಾಜ್ಯದ ನಾಲ್ಕು ಸ್ಥಾನಗಳಿಗೆ ಸೇರಿದಂತೆ ದೇಶದ ಒಟ್ಟು 56 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ.
ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಸೈಯದ್ ನಾಸಿರ್ ಹುಸೇನ್ ಅವರ ಅವಧಿ ಏಪ್ರಿಲ್ 2 ರಂದು ಅಂತ್ಯವಾಗಲಿದೆ.
ನಾಮಪತ್ರ ಸಲ್ಲಿಸಲು ಫೆ.15 ರಂದು ಕೊನೆಯ ದಿನಾಂಕವಾಗಿದ್ದು, ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಮತ್ತು ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಉತ್ತರ ಪ್ರದೇಶದ 10, ಮಹಾರಾಷ್ಟ್ರ 6, ಬಿಹಾರ 6, ಪಶ್ಚಿಮ ಬಂಗಾಳ 5, ಮಧ್ಯ ಪ್ರದೇಶ 5, ಗುಜರಾತ್ 4, ಆಂಧ್ರ ಪ್ರದೇಶ 3, ತೆಲಂಗಾಣ 3, ರಾಜಸ್ಥಾನ 3, ಕರ್ನಾಟಕ 4, ಉತ್ತರಾಖಂಡ 1, ಛತ್ತೀಸ್‌ಗಢ 1, ಒಡಿಶಾ 3, ಹರ್ಯಾಣ 1 ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
Advertisement