ಸೊಮಾಲಿ ಕಡಲ್ಗಳ್ಳರಿಂದ ಇರಾನ್ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ!

ಅರಬ್ಬೀ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರು ತಮ್ಮ ಹಡಗನ್ನು ಅಪಹರಿಸಿದ್ದಾರೆ ಎಂಬ ಸಂಕಷ್ಟದ ಕರೆ ಇರಾನ್ ಹಡಗಿನಿಂದ ಬಂದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ನೌಕಾಪಡೆಯು ಅಪಹರಣಕ್ಕೊಳಗಾಗಿದ್ದ ಹಡಗು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇರಾನ್ ಹಡಗು
ಇರಾನ್ ಹಡಗು

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರು ತಮ್ಮ ಹಡಗನ್ನು ಅಪಹರಿಸಿದ್ದಾರೆ ಎಂಬ ಸಂಕಷ್ಟದ ಕರೆ ಇರಾನ್ ಹಡಗಿನಿಂದ ಬಂದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ನೌಕಾಪಡೆಯು ಅಪಹರಣಕ್ಕೊಳಗಾಗಿದ್ದ ಹಡಗು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಭಾರತೀಯ ನೌಕಾಪಡೆಯ ಗಸ್ತು ನೌಕೆ ಐಎನ್ಎಸ್ ಸುಮಿತ್ರಾ, ಸೋಮಾಲಿಯಾದ ಪೂರ್ವ ಕರಾವಳಿ ಮತ್ತು ಏಡೆನ್ ಕೊಲ್ಲಿಯಲ್ಲಿ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, ಇರಾನ್ ಮೀನುಗಾರಿಕೆ ಹಡಗು ಇಮಾನ್‌ನ ಅಪಹರಿಸಲಾಗಿತ್ತು. ನಂತರ ಕಡಲ್ಗಳ್ಳರು ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದರು. ಈ ಹಡಗಿನಲ್ಲಿ 17 ಮಂದಿ ಭಾರತೀಯ ಮೀನುಗಾರಿದ್ದರು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಐಎನ್‌ಎಸ್ ಸುಮಿತ್ರಾ ಇರಾನ್ ಹಡಗನ್ನು ಅಪಹರಣ ಮಾಡಿದ್ದ ಸೊಮಾಲಿ ಕಡಲ್ಗಳ್ಳರಿಗೆ ಎಚ್ಚರಿಕೆ ಸಂದೇಶ ಕಳುಹಿಸಿತ್ತು. ಕೂಡಲೇ ಹಗಡನ್ನು ಬಿಟ್ಟು ಹೋಗುವಂತೆ ಸೂಚಿಸಿತ್ತು. ನಂತರ ಕಡಲ್ಗಳ್ಳರು ಹಗಡನ್ನು ಬಿಟ್ಟು ದೋಣಿಯಲ್ಲಿ ಪರಾರಿಯಾದರು.

ಭಾರತೀಯ ನೌಕಾಪಡೆಯ ಹಡಗುಗಳನ್ನು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಕಡಲ ಭದ್ರತಾ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿದೆ. ಇದು ಸಮುದ್ರದಲ್ಲಿನ ಎಲ್ಲಾ ಹಡಗುಗಳು ಮತ್ತು ನಾವಿಕರ ಸುರಕ್ಷತೆಯ ಕಡೆಗೆ ಭಾರತೀಯ ನೌಕಾಪಡೆಯ ಸಂಕಲ್ಪವನ್ನು ಸಂಕೇತಿಸುತ್ತದೆ.

INS ಸುಮಿತ್ರಾ, ಇತರ ಯುದ್ಧನೌಕೆಗಳು ಮತ್ತು ಕಣ್ಗಾವಲು ವಿಮಾನಗಳನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಈ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಇದು ಕೆಂಪು ಸಮುದ್ರ, ಏಡೆನ್ ಕೊಲ್ಲಿಯಲ್ಲಿ ಸಾಗುವ ಅಂತಾರಾಷ್ಟ್ರೀಯ ವ್ಯಾಪಾರಿ ಹಡಗುಗಳಿಗೆ ಭದ್ರತೆ ನೀಡುತ್ತಿದೆ. ಅರೇಬಿಯನ್ ಸಮುದ್ರದಲ್ಲಿ ಕಡಲ ಕಣ್ಗಾವಲು ಪ್ರಯತ್ನಗಳನ್ನು ಗಣನೀಯವಾಗಿ ಹೆಚ್ಚಿಸಿದೆ.

ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ದಾಳಿಗಳು ನಡೆಯುವುದು ಕಡಿಮೆಯಾಗಿತ್ತು. ಆದರೆ ಇಸ್ರೇಲ್​​-ಹಮಾಸ್​​​ ಯುದ್ಧದ ನಂತರ ಇಂತಹ ದಾಳಿಗಳು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಭಯೋತ್ಪಾದನೆ ಸಂಘಟನೆಗಳು ವಾಣಿಜ್ಯ ಹಡಗುಗಳನ್ನು ಗುರಿಯಾಗಿ ದಾಳಿಯನ್ನು ನಡೆಸಿದೆ. ಅದರಲ್ಲೂ ಭಾರತಕ್ಕೆ ಬರುವ ಹಡಗುಗಳನ್ನು ಟಾರ್ಗೆಟ್​​​ ಮಾಡುತ್ತಿದೆ ಎಂದು ಹೇಳಲಾಗಿದೆ.

ಜನವರಿ 26ರಂದು ಬ್ರಿಟಿಷ್ ತೈಲ ಟ್ಯಾಂಕರ್​​ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದರು. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿತ್ತು. ಈ ಕರೆಗೆ ಸ್ಪಂದಿಸಿ ಭಾರತೀಯ ನೌಕಾಪಡೆಯು ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com