ಆರು ದಿನಗಳ ಕಾಲ್ನಡಿಗೆ ಮೂಲಕ ಅಯೋಧ್ಯೆ ರಾಮ ಮಂದಿರ ತಲುಪಿ ಪ್ರಾರ್ಥನೆ ಸಲ್ಲಿಸಿದ 350 ಮುಸಲ್ಮಾನರು!

ಲಕ್ನೋದಿಂದ ಆರು ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸಿದ 350 ಮಂದಿ ಮುಸ್ಲಿಂ ಭಕ್ತರು ಅಯೋಧ್ಯೆಗೆ ತಲುಪಿ ರಾಮಮಂದಿರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ. 
ಅಯೋಧ್ಯೆ
ಅಯೋಧ್ಯೆ

ಅಯೋಧ್ಯೆ: ಲಕ್ನೋದಿಂದ ಆರು ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸಿದ 350 ಮಂದಿ ಮುಸ್ಲಿಂ ಭಕ್ತರು ಅಯೋಧ್ಯೆಗೆ ತಲುಪಿ ರಾಮಮಂದಿರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ. 

ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ತಂಡ ಜನವರಿ 25 ರಂದು ಲಕ್ನೋದಿಂದ ಪಯಣ ಆರಂಭಿಸಿತು ಎಂದು ಎಂಆರ್ ಎಂ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದಾರೆ. 

350 ಮುಸ್ಲಿಂ ಭಕ್ತರ ತಂಡ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆ ಸುಮಾರು 150 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ನಿನ್ನೆ ಮಂಗಳವಾರ ಅಯೋಧ್ಯೆಗೆ ತಲುಪಿದೆ. ರಾತ್ರಿ ಹೊತ್ತು ವಿಶ್ರಾಂತಿಗಾಗಿ ಪ್ರತಿ 25 ಕಿಲೋಮೀಟರ್‌ಗಳಲ್ಲಿ ನಿಲ್ಲಿಸಿ ಮರುದಿನ ಬೆಳಗ್ಗೆ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. 

ಆರು ದಿನಗಳ ನಂತರ ಅಯೋಧ್ಯೆ ತಲುಪಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು ಎಂದು ಸಯೀದ್ ಹೇಳಿದರು.

ಭಕ್ತರು ಇಮಾಮ್-ಎ-ಹಿಂದ್ ರಾಮ್ ಅವರ ಈ ಗೌರವದ ದರ್ಶನವನ್ನು ಶಾಶ್ವತ ಮತ್ತು ಪಾಲಿಸಬೇಕಾದ ಸ್ಮರಣೆ ಎಂದು ಪರಿಗಣಿಸಿದ್ದಾರೆ ಎಂದು ಅವರು ಹೇಳಿದರು, ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com