ಜಾರ್ಖಂಡ್ ಮುಖ್ಯಮಂತ್ರಿಯಾಗಿ ಕಲ್ಪನಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಹೇಮಂತ್ ಸೋರೆನ್ ಅತ್ತಿಗೆ ಸೀತಾ

ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಮ್ಮ ಪತ್ನಿ ಕಲ್ಪನಾ ಸೋರೆನ್ ಅವರನ್ನು ಜಾರ್ಖಂಡ್‌ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳ ನಡುವೆ, ಅವರ ಅತ್ತಿಗೆ ಮತ್ತು ಸಹೋದರ...
ಸೀತಾ ಸೋರೆನ್x
ಸೀತಾ ಸೋರೆನ್x

ಜಾರ್ಖಂಡ್: ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಮ್ಮ ಪತ್ನಿ ಕಲ್ಪನಾ ಸೋರೆನ್ ಅವರನ್ನು ಜಾರ್ಖಂಡ್‌ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳ ನಡುವೆ, ಅವರ ಅತ್ತಿಗೆ ಮತ್ತು ಸಹೋದರ ದಿವಂಗತ ದುರ್ಗಾ ಸೋರೆನ್ ಅವರ ಪತ್ನಿ ಸೀತಾ ಸೋರೆನ್ ಅವರು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಹೇಮಂತ್ ಸೋರೆನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಒಂದು ಹೇಮಂತ್ ಸೋರೆನ್ ಅವರನ್ನು ಬಂಧಿಸಿದರೆ ಕಲ್ಪನಾ ಸೋರೆನ್ ಅವರು ಜಾರ್ಖಂಡ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. 

ಕಲ್ಪನಾ ಮುಂದಿನ ಮುಖ್ಯಮಂತ್ರಿಯಾಗಲು ಜಾಮಾ ವಿಧಾನಸಭಾ ಕ್ಷೇತ್ರದ ಜೆಎಂಎಂ ಶಾಸಕಿ ಮತ್ತು ಹೇಮಂತ್ ಸೋರೆನ್ ಅವರ ಅತ್ತಿಗೆ ಸೀತಾ ಸೋರೆನ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಗಮನಾರ್ಹವೆಂದರೆ, ಮಂಗಳವಾರ ಹೇಮಂತ್ ಸೋರೆನ್ ಅವರ ರಾಂಚಿ ನಿವಾಸದಲ್ಲಿ ನಡೆದ ಆಡಳಿತಾರೂಢ ಮೈತ್ರಿಕೂಟದ ಶಾಸಕರೊಂದಿಗಿನ ಸಭೆಯಲ್ಲಿ ಸೀತಾ ಸೋರೆನ್ ಅವರು ಹಾಜರಿರಲಿಲ್ಲ. ಬುಧವಾರವೂ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಸಭೆಯ ವಿರೋಧಿಯಲ್ಲ ಮತ್ತು ಪಕ್ಷದಲ್ಲಿ ಒಗ್ಗಟ್ಟನ್ನು ಬೆಂಬಲಿಸುತ್ತೇವೆ. ಆದರೆ ಕಲ್ಪನಾ ಸೋರೆನ್ ಅವರನ್ನು ಮುಖ್ಯಮಂತ್ರಿ ಮಾಡುವ ಯಾವುದೇ ನಿರ್ಧಾರವನ್ನು ವಿರೋಧಿಸುತ್ತೇನೆ ಎಂದು ಸೀತಾ ಸೋರೆನ್ ಅವರು ತಿಳಿಸಿದ್ದಾರೆ.

ಮಂಗಳವಾರದ ಸಭೆಯಲ್ಲಿ, ಆಡಳಿತಾರೂಢ ಮೈತ್ರಿಕೂಟದ ಶಾಸಕರು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಎಂ ಸೋರೆನ್ ಅವರನ್ನು ಬಂಧಿಸಿದರೆ ಅಥವಾ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಕಲ್ಪನಾ ಅವರನ್ನು ಆಯ್ಕೆ ಮಾಡಲು 'ಸಮ್ಮತಿ ಪತ್ರ'ಕ್ಕೆ ಸಹಿ ಹಾಕಲಾಗಿದೆ ಎಂದು ವರದಿಯಾಗಿದೆ.

ಸೀತಾ ಸೊರೆನ್ ಪ್ರಕಾರ, ಅವರ ಪತಿ ದಿವಂಗತ ದುರ್ಗಾ ಸೋರೆನ್ ಅವರ ತಂದೆ ಮತ್ತು ಜೆಎಂಎಂ ಸಂಸ್ಥಾಪಕ ಶಿಬು ಸೋರೆನ್ ಅವರೊಂದಿಗೆ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪತಿ ನಿಧನದ ನಂತರ ಪಕ್ಷಕ್ಕಾಗಿ ನಾನು ಸಹ ಸಾಕಷ್ಟು ತ್ಯಾಗ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

"ನಾನು ಯಾವಾಗಲೂ ಏಕೆ ಬಿಟ್ಟುಕೊಡಬೇಕು?" ಎಂದು ಪ್ರಶ್ನಿಸಿದ ಸೀತಾ, "ಹೇಮಂತ್ ಸೋರೆನ್ ಅವರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರವನ್ನು ನಾನು ಒಪ್ಪಿಕೊಂಡಿದ್ದೇನೆ. ಆದರೆ ನಾನು ಕಲ್ಪನಾ ಸೋರೆನ್ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com