ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್ ಗೆ ದೆಹಲಿ ಕೋರ್ಟ್ 5 ತಿಂಗಳು ಜೈಲು ಶಿಕ್ಷೆ

23 ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿಕೆ ಸಕ್ಸೇನಾ ಗುಜರಾತ್ ನ ಎನ್ ಜಿಒ ಮುಖ್ಯಸ್ಥರಾಗಿದ್ದಾಗ ಈ ಮೊಕದ್ದಮೆ ದಾಖಲಾಗಿತ್ತು.
Medha Patkar
ಮೇಧಾ ಪಾಟ್ಕರ್online desk
Updated on

ನವದೆಹಲಿ: ಮಾನನಷ್ಟ ಮೊಕದ್ದಮೆಯೊಂದರಲ್ಲಿ ದೆಹಲಿ ಕೋರ್ಟ್ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಗೆ 5 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.

23 ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿಕೆ ಸಕ್ಸೇನಾ ಗುಜರಾತ್ ನ ಎನ್ ಜಿಒ ಮುಖ್ಯಸ್ಥರಾಗಿದ್ದಾಗ ಈ ಮೊಕದ್ದಮೆ ದಾಖಲಾಗಿತ್ತು.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ಮೇಧಾ ಪಾಟ್ಕರ್ ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ನ್ಯಾಯಾಲಯವು ತನ್ನ ಮುಂದೆ ಇರುವ ಸಾಕ್ಷ್ಯಗಳನ್ನು ಮತ್ತು ಎರಡು ದಶಕಗಳಿಂದ ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿ ಪಾಟ್ಕರ್ ಅವರಿಗೆ ಶಿಕ್ಷೆ ವಿಧಿಸಿದೆ.

ಆದಾಗ್ಯೂ, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಾಟ್ಕರ್‌ಗೆ ಅನುವು ಮಾಡಿಕೊಡಲು ನ್ಯಾಯಾಲಯ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ. ತಮ್ಮ ಮತ್ತು ನರ್ಮದಾ ಬಚಾವೋ ಆಂದೋಲನ (NBA) ವಿರುದ್ಧ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಪಾಟ್ಕರ್ ಮತ್ತು ಸಕ್ಸೇನಾ 2000 ರಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದರು.

Medha Patkar
ಮಾನನಷ್ಟ ಪ್ರಕರಣ: NBA ನಾಯಕಿ ಮೇಧಾ ಪಾಟ್ಕರ್ ದೋಷಿ

ನಂತರ ಅಹಮದಾಬಾದ್ ಮೂಲದ 'ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್' ಹೆಸರಿನ ಎನ್‌ಜಿಒ ಮುಖ್ಯಸ್ಥರಾಗಿದ್ದ ಸಕ್ಸೇನಾ ಅವರು ಟಿವಿ ಚಾನೆಲ್‌ನಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಮಾನಹಾನಿಕರ ಪತ್ರಿಕಾ ಹೇಳಿಕೆಯನ್ನು ನೀಡಿದ್ದಕ್ಕಾಗಿ 2001 ರಲ್ಲಿ ಪಾಟ್ಕರ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com