
ನವ ದೆಹಲಿ: ಇಂದು ಜುಲೈ 1ರಂದು ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳು ಭಾರತದಲ್ಲಿ ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿದೆ, ಅಪರಾಧ ನ್ಯಾಯ ವ್ಯವಸ್ಥೆಯನ್ನು 'ಸಂಪೂರ್ಣವಾಗಿ ಸ್ವದೇಶಿ' ಆಗಿ ಪರಿವರ್ತಿಸಿದೆ, ಇದು ಭಾರತೀಯ ನೀತಿಯಲ್ಲಿ ಹುದುಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಈ ಕ್ರಿಮಿನಲ್ ಕಾನೂನುಗಳು ಅನುಷ್ಠಾನ ಪೂರ್ಣಗೊಂಡ ನಂತರ, ಅತ್ಯಂತ ಆಧುನಿಕ ಕಾನೂನುಗಳಾಗಿ ನಿಲ್ಲುತ್ತವೆ ಎಂದರು.
ಶಿಕ್ಷೆಯ ಬದಲಿಗೆ ನ್ಯಾಯ, ತ್ವರಿತ ವಿಚಾರಣೆ ಮತ್ತು ವಿಳಂಬದ ಜಾಗದಲ್ಲಿ ನ್ಯಾಯ ಒದಗಿಸಲಾಗುವುದು, ಮೊದಲು ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿತ್ತು, ಆದರೆ ಈಗ ಸಂತ್ರಸ್ತರ ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುವುದು ಎಂದು ಹೇಳಿದರು.
ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ 22.5 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು 12,000 ಮಾಸ್ಟರ್ ಟ್ರೈನರ್‌ಗಳನ್ನು ನಿಯೋಜಿಸಲಾಗಿದೆ ಎಂದರು.
ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳು ಅಪರಾಧಗಳು ನಡೆಯುವುದನ್ನು ಕಡಿಮೆ ಮಾಡುತ್ತವೆ. ಹೊಸ ಕಾನೂನುಗಳ ಅಡಿಯಲ್ಲಿ ಶೇಕಡಾ 90ರಷ್ಟು ಶಿಕ್ಷೆಯ ಪ್ರಮಾಣವನ್ನು ಕಾಣಬಹುದು ಎಂದರು.
ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದಾಖಲಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇದು ಕಳ್ಳತನ ಪ್ರಕರಣವಾಗಿದೆ. ಸೈಕಲ್ ಕಳ್ಳತನವಾಗಿತ್ತು. ಪ್ರಕರಣವನ್ನು 12:10 ಕ್ಕೆ ದಾಖಲಿಸಲಾಗಿದೆ ಎಂದರು.
Advertisement