ಮಹಾರಾಷ್ಟ್ರ MLC ಚುನಾವಣೆ: BJP ಅಭ್ಯರ್ಥಿಯನ್ನು ಸೋಲಿಸಿದ ಉದ್ಧವ್ ಬಣದ ಶಿವಸೇನೆ ನಾಯಕ ಅನಿಲ್ ಪರಬ್!

ಶಿವಸೇನೆ-ಯುಬಿಟಿ ನಾಯಕ ಅನಿಲ್ ಪರಬ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮುಂಬೈ ಪದವೀಧರ ಕ್ಷೇತ್ರದಿಂದ BJP ಕಿರಣ್ ಶೆಲಾರ್ ಅವರನ್ನು ಸೋಲಿಸಿದ್ದಾರೆ.
ಶಿವಸೇನೆ ನಾಯಕ ಅನಿಲ್ ಪರಬ್
ಶಿವಸೇನೆ ನಾಯಕ ಅನಿಲ್ ಪರಬ್
Updated on

ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯ ಫಲಿತಾಂಶದಲ್ಲಿ ಶಿವಸೇನೆ-ಯುಬಿಟಿಗೆ ಖುಷಿಯ ಸುದ್ದಿ ಸಿಕ್ಕಿದೆ. ಶಿವಸೇನೆ-ಯುಬಿಟಿ ನಾಯಕ ಅನಿಲ್ ಪರಬ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮುಂಬೈ ಪದವೀಧರ ಕ್ಷೇತ್ರದಿಂದ BJP ಕಿರಣ್ ಶೆಲಾರ್ ಅವರನ್ನು ಸೋಲಿಸಿದ್ದಾರೆ.

ಮುಂಬೈ ಪದವೀಧರ ಕ್ಷೇತ್ರದಿಂದ ಅನಿತ್ ಪರಬ್ 44,784 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಶೇಲಾರ್ 18,772 ಮತಗಳನ್ನು ಪಡೆದರು. ಜೂನ್ 26ರಂದು ನಡೆದ ಮತದಾನದಲ್ಲಿ ಒಟ್ಟು 67,644 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಚಲಾವಣೆಯಾದ ಒಟ್ಟು ಮತಗಳಲ್ಲಿ 64,222 ಮತಗಳು ಸಿಂಧುವಾಗಿದ್ದು, ಗೆಲುವಿನ ಕೋಟಾ 32,112 ಮತಗಳಾಗಿವೆ.

ಮೊದಲ ಪ್ರಾಶಸ್ತ್ಯದ ಮತದಾನದಲ್ಲಿ ಅನಿಲ್ ಪರಬ್ 44,784 ಮತಗಳನ್ನು ಪಡೆದು ಆಯ್ಕೆಯಾದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವಿನ ನಂತರ ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಅನಿಲ್ ಪರಬ್ ಸಂಭ್ರಮಿಸಿದರು. ಶಿವಸೇನೆ-ಯುಬಿಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, 'ಅನಿಲ್ ಪರಬ್ ಅವರ ಅದ್ಭುತ ವಿಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು.

ಶಿವಸೇನೆ ನಾಯಕ ಅನಿಲ್ ಪರಬ್
ಮೈಕ್ ಆಫ್ ಮಾಡೋಕೆ ನನ್ನ ಚೇರ್ ಕೆಳಗೆ ಸ್ವಿಚ್ ಇಲ್ಲ; 'ಸಾಮಾನ್ಯ ಪ್ರಜ್ಞೆ ಇರಲಿ': ವಿಪಕ್ಷಗಳ ಆರೋಪಕ್ಕೆ ಓಂ ಬಿರ್ಲಾ ಕಟು ಟೀಕೆ

ಮುಂಬೈ ಪದವೀಧರ ಕ್ಷೇತ್ರ, ಕೊಂಕಣ ವಿಭಾಗದ ಪದವೀಧರ ಕ್ಷೇತ್ರ, ನಾಸಿಕ್ ವಿಭಾಗ ಶಿಕ್ಷಕರ ಕ್ಷೇತ್ರ ಮತ್ತು ಮುಂಬೈ ಶಿಕ್ಷಕರ ಕ್ಷೇತ್ರಗಳನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಕಳೆದ ವಾರ ಮತದಾನ ನಡೆದಿತ್ತು.

ಅನಿಲ್ ಪರಬ್ ಯಾರು?

ಅನಿಲ್ ಪರಬ್ ಅವರು ವಿಧಾನ ಪರಿಷತ್ತಿನಲ್ಲಿ ಶಿವಸೇನೆಯನ್ನು ಪ್ರತಿನಿಧಿಸುತ್ತಾರೆ. ಅವರು ಉದ್ಧವ್ ಠಾಕ್ರೆ ಅವರಿಗೆ ನಿಕಟ ನಾಯಕರೆಂದು ಹೆಸರುವಾಸಿಯಾಗಿದ್ದಾರೆ. ಅನಿಲ್ ಪರಬ್ ಅವರು 2012 ಮತ್ತು 2018 ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಈ ಬಾರಿ ಮತ್ತೊಮ್ಮೆ ಶಿವಸೇನೆ-ಯುಬಿಟಿ ಅವರನ್ನು ವಿಧಾನ ಪರಿಷತ್ತಿಗೆ ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com