
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ 'NEET' ಅನ್ನು ವ್ಯಾಪಾರೀಕರಣ ಮಾಡಲಾಗುತ್ತಿದ್ದು, ಶ್ರೀಮಂತರ ಮಕ್ಕಳಿಗೆ ತಕ್ಕಂತೆ ಮಾಡಲಾಗುತ್ತಿದೆ ಎಂದು ಲೋಕಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ. ಅವರ ಕುಟುಂಬದವರು ಆರ್ಥಿಕ ಮತ್ತು ಭಾವನಾತ್ಮಕವಾಗಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುತ್ತಾರೆ. ಆದರೆ, ಪ್ರಸ್ತುತ ನೀಟ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಂಬುತ್ತಿಲ್ಲ. ಏಕೆಂದರೆ ಪರೀಕ್ಷೆಯನ್ನು ಶ್ರೀಮಂತರ ಮಕ್ಕಳಿಗೆ ತಕ್ಕಂತೆ ರೂಪಿಸಲಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಹಲವಾರು ಬಾರಿ NEET ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದೇನೆ.ಅವರಲ್ಲಿ ಪ್ರತಿಯೊಬ್ಬರು ಈ ಪರೀಕ್ಷೆಯನ್ನು ಶ್ರೀಮಂತರ ಕೋಟಾ ರಚಿಸಲು, ಅಂತಹ ಮಕ್ಕಳಿಗೆ ತಕ್ಕಂತೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡದಂತೆ ಪತ್ರಿಕೆ ಸಿದ್ದಪಡಿಸಲಾಗುತ್ತಿದೆ ಹೇಳಿರುವುದಾಗಿ ರಾಹುಲ್ ಗಾಂಧಿ ಸದನಕ್ಕೆ ತಿಳಿಸಿದರು.
Advertisement