ಮಹಾರಾಷ್ಟ್ರ: ದರ್ಗಾಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಐವರು ಯುವಕರು ದುರ್ಮರಣ

ಮಹಾರಾಷ್ಟ್ರದ ದಿಗಾವಾಲಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೆಲಂಗಾಣದ ಐವರು ಯುವಕರು ಸಾವನ್ನಪ್ಪಿದ್ದಾರೆ.
ಭೀಕರ ಅಪಘಾತ ಐವರು ಸಾವು
ಭೀಕರ ಅಪಘಾತ ಐವರು ಸಾವು

ದಿಗಾವಾಲಾ: ಮಹಾರಾಷ್ಟ್ರದ ದಿಗಾವಾಲಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೆಲಂಗಾಣದ ಐವರು ಯುವಕರು ಸಾವನ್ನಪ್ಪಿದ್ದಾರೆ.

ಕಳೆದ ಭಾನುವಾರ ನಾರಾಯಣಖೇಡ್‌ನಿಂದ ನಾಲ್ವರು ಮತ್ತು ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾರಾದಿಂದ ಇಬ್ಬರು ಮುಂಬೈಗೆ ಭೇಟಿ ನೀಡಲು ತೆರಳಿದ್ದರು. ಕಾರಿನ ಸ್ಟೇರಿಂಗ್ ಮೇಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ನಂತರ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತರಲ್ಲಿ ಮೆಹಬೂಬ್ ಖುರೇಷಿ, ಫಿರೋಜ್ ಖುರೇಷಿ, ರಫೀಕ್ ಖುರೇಷಿ, ಫಿರೋಜ್ ಖುರೇಷಿ ಮತ್ತು ಮಜೀದ್ ಪಟೇಲ್ ಸೇರಿದ್ದಾರೆ. ಸೈಯದ್ ಅಮರ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಮರ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಎಲ್ಲಾ ಆರು ಯುವಕರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಭೀಕರ ಅಪಘಾತ ಐವರು ಸಾವು
ಪೋರ್ಷೆ ಕಾರು ಅಪಘಾತ: ಅಪಹರಣ ಪ್ರಕರಣದಲ್ಲಿ ಬಾಲಾಪರಾಧಿ ತಂದೆ, ಅಜ್ಜನಿಗೆ ಜಾಮೀನು

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆರು ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಕೂಡಲೇ ದಿಗವಾಲ್‌ಗೆ ತೆರಳುತ್ತಿದ್ದು ಮೃತದೇಹಗಳನ್ನು ಸ್ವಗ್ರಾಮಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com