Naxal Encounter: ಐವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ನಾರಾಯಣಪುರ: ನಾರಾಯಣಪುರ ಜಿಲ್ಲೆಯ ಕೊಹ್ಕಮೇಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರು ಹತರಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್‌ಮದ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಮತ್ತೊಮ್ಮೆ ಎನ್‌ಕೌಂಟರ್ ನಡೆದಿದ್ದು, ಈ ಎನ್‌ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಹತರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.
ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು-ನಕ್ಸಲ್ ಎನ್‌ಕೌಂಟರ್‌ನಲ್ಲಿ 5 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೇಕ ನಕ್ಸಲರು ಗಾಯಗೊಂಡಿದ್ದಾರೆ ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ ಹೇಳಿದ್ದಾರೆ. ಮಾವೋವಾದಿಗಳ ತಾತ್ಕಾಲಿಕ ಶಿಬಿರದಿಂದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ನಕ್ಸಲ್ ಬರಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಮಾವೋವಾದಿ ಸಂಘಟನೆಯ ನಕ್ಸಲರು ಬೀಡು ಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಯೋಧರು ಕಾರ್ಯಾಚರಣೆ ಕೈಗೊಂಡಿದ್ದರು.
ಇದೇ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ಭದ್ರತಾ ಪಡೆಗಳು 16 ನಕ್ಸಲರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಈ ಐದು ಜಿಲ್ಲೆಗಳಲ್ಲಿ ಪೊಲೀಸರೇ 'ಮಾದ್ ಬಚಾವೋ ಅಭಿಯಾನ' ನಡೆಸುತ್ತಿರುವುದು ಗಮನಾರ್ಹ.
ವಾಸ್ತವವಾಗಿ, ಜೂನ್ 30ರಂದು ಬಸ್ತಾರ್ ವಿಭಾಗದ ನಾರಾಯಣಪುರ, ದಾಂತೇವಾಡ, ಬಸ್ತಾರ್, ಕೊಂಡಗಾಂವ್ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ಸುಮಾರು 1400 ಡಿಆರ್‌ಜಿ, ಎಸ್‌ಟಿಎಫ್, ಬಿಎಸ್‌ಎಫ್ ಮತ್ತು ಐಟಿಬಿಪಿ ಸಿಬ್ಬಂದಿ ನಕ್ಸಲೀಯರ ಪ್ರಮುಖ ಪ್ರದೇಶವಾದ ಅಬುಜ್‌ಮದ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಅರಣ್ಯದಲ್ಲಿ ಸೈನಿಕರು ಮತ್ತು ನಕ್ಸಲರ ನಡುವೆ ಮುಖಾಮುಖಿಯಾಗಿತ್ತು. ಜುಲೈ 2ರಂದು ಬೆಳಿಗ್ಗೆ ನಕ್ಸಲರು ಮತ್ತು ಸೈನಿಕರ ನಡುವೆ ಎನ್‌ಕೌಂಟರ್ ನಡೆಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ