'ತೆಗೆದುಹಾಕಿರುವ ನನ್ನ ಹೇಳಿಕೆಗಳನ್ನು ಮತ್ತೆ ಸೇರಿಸಿ': ಲೋಕಸಭಾಧ್ಯಕ್ಷರಿಗೆ ರಾಹುಲ್ ಗಾಂಧಿ ಮನವಿ

ಪ್ರಧಾನಿ ನರೇಂದ್ರ ಮೋದಿಯವರ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು, ಆದರೆ ವಾಸ್ತವದಲ್ಲಿ ಅಲ್ಲ, ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಮತ್ತು ಅದು ಸತ್ಯ ಕೂಡ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಮಾಡಿದ್ದ ಚೊಚ್ಚಲ ಭಾಷಣದ ಕೆಲವು ಭಾಗಗಳನ್ನು ತೆಗೆದುಹಾಕಿದ್ದನ್ನು ಹಿಂಪಡೆಯಬೇಕೆಂದು ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಲೋಕಸಭಾಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ, ''ನನ್ನ ಭಾಷಣದ ಗಮನಾರ್ಹ ಭಾಗವನ್ನು ಕಾರ್ಯವೈಖರಿಯಿಂದ ಸರಳವಾಗಿ ತೆಗೆದುಹಾಕಿರುವ ಕ್ರಮ ನನಗೆ ಆಘಾತವನ್ನುಂಟುಮಾಡಿದೆ. ನಾನು ಪರಿಗಣಿಸಿದ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕುವುದು ಸಂಸತ್ತಿನ ತತ್ವಗಳಿಗೆ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು, ಆದರೆ ವಾಸ್ತವದಲ್ಲಿ ಅಲ್ಲ, ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಮತ್ತು ಅದು ಸತ್ಯ ಕೂಡ. ಅವರು ಎಷ್ಟು ಬೇಕಾದರೂ ಹೊರಹಾಕಬಹುದು, ಆದರೆ ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ
ವಿರೋಧ ಪಕ್ಷದ ನಾಯಕನ ಚೊಚ್ಚಲ ಭಾಷಣಕ್ಕೆ ಕತ್ತರಿ: ವಾಸ್ತವದಲ್ಲಿ ಸತ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ- ರಾಹುಲ್ ಗಾಂಧಿ

ಇನ್ನೊಂದೆಡೆ ಇಂದು ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್ ಕರ್ ಮತ್ತು ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com