ಉತ್ತರ ಪ್ರದೇಶದಲ್ಲಿ ನಾವು 80ಕ್ಕೆ 80 ಸೀಟು ಗೆದ್ದರೂ ಇವಿಎಂ ನಂಬುವುದಿಲ್ಲ: ಲೋಕಸಭೆಯಲ್ಲಿ ಅಖಿಲೇಶ್

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಇವಿಎಂಗಳನ್ನು ತೆಗೆದುಹಾಕುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ನವದೆಹಲಿ: ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ನಾವೇ ಗೆದ್ದರೂ ಇವಿಎಂಗಳನ್ನು ನಂಬುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಖಿಲೇಶ್ ಯಾದವ್, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಇವಿಎಂಗಳನ್ನು ತೆಗೆದುಹಾಕುತ್ತೇವೆ ಎಂದು ಹೇಳಿದರು.

"ಮಾದರಿ ನೀತಿ ಸಂಹಿತೆ ಜಾರಿಯಾದಾಗ ಸರ್ಕಾರ ಮತ್ತು ಆಯೋಗವು ಕೆಲವರ ಪರವಾಗಿ ಇತ್ತು. ನಾನು ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಬಯಸುವುದಿಲ್ಲ. ಚುನಾವಣಾ ಆಯೋಗದ ಬಗ್ಗೆ ಎಲ್ಲೋ ಒಂದು ಪ್ರಶ್ನೆ ಹುಟ್ಟುಹಾಕಿದೆ" ಎಂದು ಯಾದವ್ ಹೇಳಿದರು.

ಅಖಿಲೇಶ್ ಯಾದವ್
ಚುನಾವಣೆಯಲ್ಲಿ ಜನ ಮೋದಿ ಸರ್ಕಾರದ ಅಹಂ ಮುರಿದಿದ್ದಾರೆ, ಕೋಮು ರಾಜಕಾರಣ ಅಂತ್ಯ: ಲೋಕಸಭೆಯಲ್ಲಿ ಅಖಿಲೇಶ್

"ನಾನು ಈ ಮುಂಚೆಯೂ ಇವಿಎಂಗಳನ್ನು ನಂಬಲಿಲ್ಲ, ಈಗಲೂ ನಾನು ನಂಬುವುದಿಲ್ಲ. ಉತ್ತರ ಪ್ರದೇಶದಲ್ಲಿ ನಾವು ಎಲ್ಲಾ 80 ಸ್ಥಾನಗಳನ್ನು ಗೆದ್ದರೂ ನಾನು ಇವಿಎಂಗಳನ್ನು ನಂಬುವುದಿಲ್ಲ" ಎಂದು ಮಾಜಿ ಸಿಎಂ ಹೇಳಿದರು.

"...ಇವಿಎಂಗಳ ಸಮಸ್ಯೆ ಇನ್ನೂ ಪರಿಹಾರ ಸಿಕ್ಕಿಲ್ಲ ಮತ್ತು ನಾವು ಸಮಾಜವಾದಿಗಳು ಅದರ ಬಗ್ಗೆ ಅಚಲವಾಗಿದ್ದೇವೆ" ಎಂದು ಯಾದವ್ ಹೇಳಿದರು.

ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎತ್ತದಿದ್ದರೆ ಉತ್ತಮ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com