
ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ 12 ರವರೆಗೆ ದೆಹಲಿಯ ನ್ಯಾಯಾಲಯವೊಂದು ಬುಧವಾರ ವಿಸ್ತರಿಸಿದೆ.
ಅಬಕಾರಿ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಜೈಲಿನಲ್ಲಿರುವ ಕೇಜ್ರಿವಾಲ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಈ ಮಧ್ಯೆ ವೈದ್ಯಕೀಯ ತಪಾಸಣೆಯ ಸಮಯದಲ್ಲಿ ತನ್ನ ಪತ್ನಿ ಸುನೀತಾ ಅಟೆಂಡರ್ ಆಗಿ ಹಾಜರಾಗಲು ಅವಕಾಶ ನೀಡುವಂತೆ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ಆದೇಶವನ್ನು ನ್ಯಾಯಾಲಯವು ಜುಲೈ 6 ಕ್ಕೆ ಕಾಯ್ದಿರಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಮಾತನಾಡಲು ನ್ಯಾಯಾಲಯದ ಅನುಮತಿಯನ್ನು ಕೋರಿದರು ಆದರೆ, ಈಗಾಗಲೇ ಅವರ ವಕೀಲರು ಪ್ರತಿನಿಧಿಸುತ್ತಿರುವುದಾಗಿ ನ್ಯಾಯಾಲಯ ಹೇಳಿತು. ಸುನೀತಾ ಹಲವು ವರ್ಷಗಳಿಂದ ನನ್ನ ಆರೋಗ್ಯ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಾಯಿಲೆಗಳು ಮತ್ತು ವೈದ್ಯಕೀಯ ಇತಿಹಾಸದ ಬಗ್ಗೆ ವಿವರವಾದ ಜ್ಞಾನವನ್ನು ಹೊಂದಿದ್ದು, ಪ್ರತಿ ವಾರ ವೈದ್ಯಕೀಯ ದಾಖಲೆಗಳಿಗೆ ಆಕೆಗೆ ಪ್ರವೇಶ ನೀಡುವುದು ಸಮರ್ಥನೀಯ ಮತ್ತು ಅತ್ಯಗತ್ಯ ಎಂದು ಮನವಿ ಮಾಡಿದರು.
ವೈದ್ಯಕೀಯ ಆರೈಕೆಯಲ್ಲಿ ಪಾರದರ್ಶಕ ಕಾನೂನಿನ ಅವಶ್ಯಕತೆ ಮಾತ್ರವಲ್ಲದೆ ನೈತಿಕ ಚಿಕಿತ್ಸೆ ಅಭ್ಯಾಸ ನಿರ್ಣಾಯಕ ಅಂಶವಾಗಿದೆ. ಆದ್ದರಿಂದ, ಕೇಜ್ರಿವಾಲ್ ಅವರಿಗೆ ಅವರ ಪತ್ನಿಯು ನೀಡುತ್ತಿದ್ದ ಎಲ್ಲಾ ಚಿಕಿತ್ಸೆಯ ಅಂಶಗಳನ್ನು ಸರಿಯಾಗಿ ತಿಳಿಸಬೇಕಾಗಿದೆ. ವೈದ್ಯಕೀಯ ಸಮಾಲೋಚನೆ ಸಮಯದಲ್ಲಿ ಸುನೀತಾ ಅಟೆಂಡೆಂಟ್ ಆಗಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯದ ನಿರ್ದೇಶನವನ್ನು ಅರ್ಜಿಯಲ್ಲಿ ಕೋರಲಾಗಿದೆ. ಜಾರಿ ನಿರ್ದೇಶನಾಲಯ ಅರ್ಜಿಯನ್ನು ವಿರೋಧಿಸಿದೆ.
Advertisement