CUET-UG ಅಭ್ಯರ್ಥಿಗಳ ದೂರು ಸರಿ ಇದ್ದಲ್ಲಿ ಮರುಪರೀಕ್ಷೆ: NTA

NTA ಪದವಿಪೂರ್ವ ಪ್ರವೇಶ ಪರೀಕ್ಷೆಯ ಉತ್ತರದ ಕೀ ಯನ್ನು ಸಹ ಪ್ರಕಟಿಸಿದೆ. ಜುಲೈ 9 ರಂದು ಸಂಜೆ 6 ಗಂಟೆಯೊಳಗೆ ಅಭ್ಯರ್ಥಿಗಳು ಉತ್ತರದ ಕೀ ಗೆ ಸಂಬಂಧಿಸಿದಂತೆ ತಮ್ಮ ಸವಾಲುಗಳನ್ನು ಸಲ್ಲಿಸಬಹುದು ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Members of NSUI, Congress's students wing, raise slogans during their protest over the alleged rigging of the NEET UG exams.
ಎನ್ಇಇಟಿ ಯುಜಿ ಪರೀಕ್ಷೆಯಲ್ಲಿನ ಅಕ್ರಮದ ವಿರುದ್ಧ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಪ್ರತಿಭಟನೆ
Updated on

ನವದೆಹಲಿ: CUET-UG ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳು ನೀಡಿರುವ ದೂರು ಸರಿ ಇದೆ ಎಂಬುದು ಪತ್ತೆಯಾದಲ್ಲಿ ಜು.15-19 ನಡುವೆ NTA (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಮರು ಪರೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NTA ಪದವಿಪೂರ್ವ ಪ್ರವೇಶ ಪರೀಕ್ಷೆಯ ಉತ್ತರದ ಕೀ ಯನ್ನು ಸಹ ಪ್ರಕಟಿಸಿದೆ. ಜುಲೈ 9 ರಂದು ಸಂಜೆ 6 ಗಂಟೆಯೊಳಗೆ ಅಭ್ಯರ್ಥಿಗಳು ಉತ್ತರದ ಕೀ ಗೆ ಸಂಬಂಧಿಸಿದಂತೆ ತಮ್ಮ ಸವಾಲುಗಳನ್ನು ಸಲ್ಲಿಸಬಹುದು ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಜೂನ್ 30 ರವರೆಗೆ ನಡೆಸಲಾದ CUET-UG ಪರೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆಗಳನ್ನು ಎನ್‌ಟಿಎ ಪರಿಹರಿಸುತ್ತಿದೆ. ದೂರು ನಿಜವೆಂದು ಕಂಡುಬಂದರೆ, ಜುಲೈ 15 ಮತ್ತು 19ರ ನಡುವೆ ಯಾವುದೇ ದಿನ ಆಯ್ದ ಕೇಂದ್ರಗಳಲ್ಲಿ ಈ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಮರುರೂಪಿಸಲು NTA ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಏಜೆನ್ಸಿ ಸ್ವೀಕರಿಸಿದ ಕುಂದುಕೊರತೆಗಳ ಬಗ್ಗೆ ಎನ್‌ಟಿಎ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಮಯದ ನಷ್ಟ ಮತ್ತು ತಾಂತ್ರಿಕ ಸಮಸ್ಯೆಗಳಿವೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.

Members of NSUI, Congress's students wing, raise slogans during their protest over the alleged rigging of the NEET UG exams.
ಮತ್ತೊಮ್ಮೆ ಪಾರದರ್ಶಕವಾಗಿ NEET-UG ಪರೀಕ್ಷೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

"ಅಭ್ಯರ್ಥಿಗಳು ಮಾಡಿದ ಆರೋಪಗಳನ್ನು ವಿಷಯ ತಜ್ಞರ ಸಮಿತಿ ಪರಿಶೀಲಿಸುತ್ತದೆ. ಪರಿಷ್ಕೃತ ಅಂತಿಮ ಉತ್ತರ ಕೀಯನ್ನು ಆಧರಿಸಿ, ಫಲಿತಾಂಶವನ್ನು ಘೋಷಿಸಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com