ಕುಲ್ಗಾಮ್‌ನಲ್ಲಿ ಅವಳಿ ಎನ್‌ಕೌಂಟರ್‌: ಮೃತ ಉಗ್ರರ ಸಂಖ್ಯೆ 5ಕ್ಕೆ ಏರಿಕೆ, ರಜೌರಿಯಲ್ಲಿ ಗುಂಡಿನ ದಾಳಿ, ಯೋಧ ಗಾಯ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಎನ್ ಕೌಂಟರ್ ನಲ್ಲಿ ಮತ್ತೊಬ್ಬ ಉಗ್ರನ ಹತ್ಯೆಯ ಬಳಿಕ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಎರಡು ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಎನ್ ಕೌಂಟರ್ ನಲ್ಲಿ ಮತ್ತೊಬ್ಬ ಉಗ್ರನ ಹತ್ಯೆಯ ಬಳಿಕ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಎರಡು ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೊಡೆರ್ಗಾಮ್ ಗ್ರಾಮದ ಎನ್‌ಕೌಂಟರ್ ಸ್ಥಳದ ಬಳಿ ಉಗ್ರರ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ ಬಳಿಕ ನಿನ್ನೆ ಮಧ್ಯಾಹ್ನ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಆರಂಭವಾಗಿದೆ.

ಮೊದರ್ಗಾಮ್ ಗ್ರಾಮದಲ್ಲಿ ಉಗ್ರರೊಂದಿಗಿನ ಆರಂಭಿಕ ಗುಂಡಿನ ಚಕಮಕಿಯಲ್ಲಿ ಯೋಧ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧನನ್ನು ಪ್ಯಾರಾ ಕಮಾಂಡೋ ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ
ಕಾಶ್ಮೀರ: ಕುಲ್ಗಾಮ್‌ನಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ನಾಲ್ವರು ಉಗ್ರರ ಹತ್ಯೆ!

ಗ್ರಾಮದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕುಲ್ಗಾಮ್ ಜಿಲ್ಲೆಯ ಫ್ರಿಸಲ್ ಚಿನ್ನಿಗಮ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಮತ್ತೊಂದು ಸುತ್ತಿನ ಗುಂಡಿನ ಚಕಮಕಿ ನಡೆಯುತ್ತಿದೆ.

ಇದುವರೆಗೆ ಕಾಳಗದಲ್ಲಿ ಐವರು ಉಗ್ರಗಾಮಿಗಳು ಹತರಾಗಿದ್ದಾರೆ, ಮೃತ ಉಗ್ರರ ದೇಹಗಳು ಫ್ರಿಸಲ್ ಚಿನ್ನಿಗಮ್‌ನ ಎನ್‌ಕೌಂಟರ್ ಪ್ರದೇಶದಲ್ಲಿ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡೂ ಎನ್‌ಕೌಂಟರ್ ಸ್ಥಳಗಳಲ್ಲಿ ಉಗ್ರರ ಚಲನವಲನದ ಮೇಲೆ ನಿಗಾ ಇಡಲು ಭದ್ರತಾ ಅಧಿಕಾರಿಗಳು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಭದ್ರತಾ ಪಡೆಗಳು ಡ್ರೋನ್ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ.

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಗುಹೆ ದೇಗುಲಕ್ಕೆ 52 ದಿನಗಳ ಅಮರನಾಥ ಯಾತ್ರೆ ನಡೆಯುತ್ತಿರುವುದರಿಂದ ಕಾಶ್ಮೀರದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ನಡುವೆ ಅವಳಿ ಎನ್‌ಕೌಂಟರ್‌ಗಳು ನಡೆದಿವೆ.

ರಾಜೌರಿಯಲ್ಲಿ ಯೋಧನಿಗೆ ಗಾಯ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯ ಮಂಜಕೋಟೆ ಪ್ರದೇಶದ ಗಲುತಿ ಗ್ರಾಮದಲ್ಲಿ ಪ್ರಾದೇಶಿಕ ಸೇನೆಯು ನಿರ್ವಹಿಸುತ್ತಿದ್ದ ಪೋಸ್ಟ್‌ನ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಯೋಧರು ಗಾಯಗೊಂಡಿದ್ದಾರೆ. ಮುಂಜಾನೆ ಉಗ್ರರು ಭದ್ರತಾ ಪಡೆ ಪೋಸ್ಟ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಂಡಿನ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದು, ಆತನನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ದಾಳಿ ನಡೆಸಿದ ಉಗ್ರರ ಪತ್ತೆಗೆ ಭದ್ರತಾ ಪಡೆಗಳು ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com